Kalagarbhakke kilikai ಕಾಲಗರ್ಭಕ್ಕೆ ಕೀಲಿಕೈ
Material type:
- K894.4 ANAK
Item type | Current library | Collection | Call number | URL | Status | Barcode | |
---|---|---|---|---|---|---|---|
![]() |
St Aloysius Library | Kannada | K894.4 ANAK (Browse shelf(Opens below)) | Link to resource | Available | 060942 |
Browsing St Aloysius Library shelves, Collection: Kannada Close shelf browser (Hides shelf browser)
ಕಾಲಗರ್ಭಕ್ಕೆ ಕೀಲಿಕೈ’ ವಿಜ್ಞಾನ-ವಿಚಾರಗಳ ಪ್ರಬಂಧ ಸಂಕಲನ. ಇಲ್ಲಿಯ ಲೇಖನಗಳ ಹರವು ದೊಡ್ಡದು. ನಿಗೂಢ ಜೀವಿಯ ಬೆನ್ನುಹತ್ತಿದ ವಿಜ್ಞಾನಿಗಳ ಸಾಹಸಗಾಥೆ ಓದುಗರನ್ನು ಭಿನ್ನ ಪ್ರಪಂಚಕ್ಕೆ ಒಯ್ಯುತ್ತದೆ. ಅತಿವೃಷ್ಟಿ ಇದ್ದರೂ ಮರುಭೂಮಿಯಾಗಿರುವ ಚಿರಾಪುಂಜಿಯ ಕಟು ವಾಸ್ತವತೆಗೆ ಇಲ್ಲಿ ಕನ್ನಡಿ ಹಿಡಿದಿದೆ.
ಹಿಮಯುಗ ಏಕೆ ಬರುತ್ತದೆ? ಬಾನಿನಲ್ಲಿ ಓಜೋನ್ ಪದರು ತೂತಾದರೆ ನಮ್ಮ ಬದುಕಿಗೆ ಅದರಿಂದೇನು? ಕಾಜಿರಂಗದ ಘೇಂಡಾಗಳ ಭವಿಷ್ಯ ಯಾರ ಕೈಯ್ಯಲ್ಲಿದೆ? ಪ್ರಳಯದ ಭೂತ ಏಕೆ ಜನರನ್ನು ಆಗಾಗ್ಗೆ ಕಾಡುತ್ತದೆ? ನಾನ್ನೂರರವತ್ತು ಕೋಟಿ ವರ್ಷಗಳ ಭೂಚರಿತ್ರೆಯ ರಹಸ್ಯವನ್ನು ಯಾವ ಕೀಲಿಕೈನಿಂದ ಒಡೆಯಬೇಕು? ಅಂಟಾರ್ಕ್‍ಟಿಕ ಅನ್ವೇಷಣೆಯಲ್ಲಿ ಎದುರಾಗುವ ಸವಾಲುಗಳು ಯಾವುವು? ತಲಕಾಡೇಕೆ ಮರಳಾಗಿದೆ? ಇಂಥ ಕುತೂಹಲಕಾರಿ ಪ್ರಶ್ನೆಗಳಿಗೆ ವೈಜ್ಞಾನಿಕವಾಗಿ ಒಪ್ಪುವ ವಿವರಣೆಗಳು ಈ ಸಂಗ್ರಹದಲ್ಲಿದೆ.
ವಿಜ್ಞಾನಕ್ಕಾಗಿಯೇ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಕೆಲವು ಸಾಧಕರ ವ್ಯಕ್ತಿ ಚಿತ್ರಣಗಳೂ ಇಲ್ಲಿವೆ. ವಿಜ್ಞಾನವೆಂದರೆ ಕೇವಲ ಅಂಕಿ-ಅಂಶಗಳ ನೀರಸ ಪ್ರತಿಪಾದನೆಯಲ್ಲ; ವಿಜ್ಞಾನಕ್ಕೂ ಆತ್ಮೀಯವಾದ ಪರಿಭಾಷೆ ಇದೆ ಎಂಬುದನ್ನು ಈ ಸಂಗ್ರಹದ ಲೇಖನಗಳು ಮತ್ತೆ ಮತ್ತೆ ನೆನಪಿಸುತ್ತವೆ. ಈ ಕೃತಿಗೆ ವಿಜ್ಞಾನ ವಿಭಾಗದಲ್ಲಿ 1999ರ ಶ್ರೇಷ್ಠ ಕೃತಿ ಎಂದು ಗೊರೂರು ಸಾಹಿತ್ಯ ಪ್ರಶಸ್ತಿ ದೊರೆತಿದೆ
There are no comments on this title.