Local cover image
Local cover image
Image from Google Jackets

Dakshina kannadada shatamanada kathegalu ದಕ್ಷಿಣ ಕನ್ನಡದ ಶತಮಾನದ ಕಥೆಗಳು

By: Material type: TextTextLanguage: Kannada Publication details: Putturu Karnataka Sangha 2003Description: 628Subject(s): DDC classification:
  • K894.308 JAND
Summary: ಬಿ. ಜನಾರ್ದನ ಭಟ್ ಅವರ ‘ದಕ್ಷಿಣ ಕನ್ನಡದ ಶತಮಾನದ ಕತೆಗಳು’ ಕೃತಿಯು ಕಳೆದ ಶತಮಾನದಲ್ಲಿ (1900-2000) ಪ್ರಕಟವಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಕತೆಗಳ ಸಂಗ್ರಹ. ಈ ಸಂಕಲನದಲ್ಲಿ ಪಂಜೆ ಮಂಗೇಶರಾಯರ “ನನ್ನ ಚಿಕ್ಕ ತಾಯಿ” ಕತೆಯಿಂದ ಆರಂಭಿಸಿ ಜೋಗಿ ಅವರ ‘ಸೀಳು ನಾಲಿಗೆ’ ಕತೆಯವರೆಗೆ ಒಟ್ಟು 59 ಶ್ರೇಷ್ಠ ಸಣ್ಣಕತೆಗಳು 620 ಪುಟಗಳಲ್ಲಿ ಹರಡಿಕೊಂಡಿವೆ ಸಾಹಿತ್ಯದ ಕಣಜವಾಗಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಕನ್ನಡ ಕುಲಕೋಟಿಯ ಜ್ಞಾನ ಪಚನೇ೦ದ್ರಿಯಗಳಿಗೆ ಸಮೃದ್ದ ಆಹಾರವುಣಿಸಿದ ತವರುನೆಲ. ಅದರಲ್ಲೂ ಕತೆ ಕಟ್ಟುವ ಕುಸುರಿ ಕೆಲಸ ‘ಕುರಿತೋದದ’ ಜನಪದರಿಂದ ತೊಡಗಿ ಇಂದಿನ ‘ನಾಗರಿಕ’ರ ತನಕ ಪ್ರತಿಯೊಬ್ಬರಿಗೂ ಕರಗತ. ಪುರಾಣದ ಕತೆಗಳು ವಿವಿಧ ಪ್ರಕಾರಗಳಾದ ಯಕ್ಷಗಾನ, ಹರಿಕಥೆ, ಕಾವ್ಯವಾಚನ, ಪುರಾಣಗಳ ಮೂಲಕ ಜನತಾವೃಕ್ಷದ ತಾಯಿ ಬೇರಿಗೇ ಹರಿದಿವೆ. ಆ ಮೂಲದ್ರವ್ಯವು ವಿಭಿನ್ನ ನೆಲೆಗಳಲ್ಲಿ, ಸೆಲೆಗಳಲ್ಲಿ ಸಾಮಾಜಿಕ ಬದುಕಿನೊಂದಿಗೆ ಮಿಳಿತಗೊಂಡು ಮರುಜೀವ ಪಡೆಯುತ್ತಲೇ ಇವೆ. ಆದುದರಿಂದಲೇ ಈ ಜಿಲ್ಲೆಯಲ್ಲಿ ಸಣ್ಣ ಕತೆಗಳದು ಹುಲುಸಾದ ಫಸಲು. ಕನ್ನಡ ಸಣ್ಣ ಕತೆಗಳ ಮೂಲಪುರುಷರಾದ ಪಂಜೆಯವರಿಂದ ತೊಡಗಿ ಅಸಂಖ್ಯ ಘನೀಭೂತ ಧಾನ್ಯಗಳು ಇಲ್ಲಿನ ಫಲಭರಿತ ಮಣ್ಣಿನಿಂದ ಪುಟಿದೆದ್ದು ಮೆರಗು ಪಡೆದಿವೆ. ಆ ಧಾನ್ಯರಾಶಿಯಿಂದ ಗಟ್ಟಿ ಬೀಜದ ಐವತ್ತೊಂಬತ್ತನಷ್ಟೇ ಆಯ್ದು ಮರುಬಿತ್ತನೆ ಮಾಡುವ ಸಾಹಸ ಮಾಡಿದ್ದಾರೆ – ಪುತ್ತೂರು ಕರ್ನಾಟಕ ಸಂಘದ ಬೋಳಂತಕೋಡಿ ಈಶ್ವರ ಭಟ್ಟರು. ಕತೆಗಾರರ ಆಯ್ಕೆ ಕಷ್ಟ; ಕತೆಗಳ ಆಯ್ಕೆ ಇನ್ನೂ ಕಷ್ಟ. ಅಂತಹ ಸಂದಿಗ್ಧದ ನಡುವೆಯೂ ದಕ್ಷಿಣ ಕನ್ನಡ ಜಿಲ್ಲೆಯ ಶತಮಾನದ ಕತೆಗಳು ಬೃಹತ್ ಸಂಪುಟವೊಂದು ಹೊರಬರುತ್ತಿರುವುದು ಸಂಪಾದಕ ಬಿ.ಜನಾರ್ದನ ಭಟ್ಟರ ಅಚಲ ‘ನೇಗಿಲ ಯೋಗಿತ್ವ’ದಿಂದಲೆ. ಇಲ್ಲಿನ ಕತೆಗಳೆಲ್ಲ ವೈವಿಧ್ಯಮಯ. ಜೀವನಾನುಭವದ ಸಾರಸತ್ವ. ಕರಾವಳಿಯ ಸಂಸ್ಕೃತಿಯನ್ನು ಬಿದಿಬಿಡಿಯಾಗಿಯೂ ಆ ಮೂಲಕ ಇಡಿಯಾಗಿಯೂ ಒಂದು ಹಿಡಿಯಾಗಿಯೂ ಕಟ್ಟಿಕೊಡುವ ಗಂಭೀರ ಪ್ರಯತ್ನವಾಗಿ ಈ ಗ್ರಂಥವನ್ನು ಪರಿಭಾವಿಸಬೇಕು.
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ಬಿ. ಜನಾರ್ದನ ಭಟ್ ಅವರ ‘ದಕ್ಷಿಣ ಕನ್ನಡದ ಶತಮಾನದ ಕತೆಗಳು’ ಕೃತಿಯು ಕಳೆದ ಶತಮಾನದಲ್ಲಿ (1900-2000) ಪ್ರಕಟವಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಕತೆಗಳ ಸಂಗ್ರಹ. ಈ ಸಂಕಲನದಲ್ಲಿ ಪಂಜೆ ಮಂಗೇಶರಾಯರ “ನನ್ನ ಚಿಕ್ಕ ತಾಯಿ” ಕತೆಯಿಂದ ಆರಂಭಿಸಿ ಜೋಗಿ ಅವರ ‘ಸೀಳು ನಾಲಿಗೆ’ ಕತೆಯವರೆಗೆ ಒಟ್ಟು 59 ಶ್ರೇಷ್ಠ ಸಣ್ಣಕತೆಗಳು 620 ಪುಟಗಳಲ್ಲಿ ಹರಡಿಕೊಂಡಿವೆ
ಸಾಹಿತ್ಯದ ಕಣಜವಾಗಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಕನ್ನಡ ಕುಲಕೋಟಿಯ ಜ್ಞಾನ ಪಚನೇ೦ದ್ರಿಯಗಳಿಗೆ ಸಮೃದ್ದ ಆಹಾರವುಣಿಸಿದ ತವರುನೆಲ. ಅದರಲ್ಲೂ ಕತೆ ಕಟ್ಟುವ ಕುಸುರಿ ಕೆಲಸ ‘ಕುರಿತೋದದ’ ಜನಪದರಿಂದ ತೊಡಗಿ ಇಂದಿನ ‘ನಾಗರಿಕ’ರ ತನಕ ಪ್ರತಿಯೊಬ್ಬರಿಗೂ ಕರಗತ. ಪುರಾಣದ ಕತೆಗಳು ವಿವಿಧ ಪ್ರಕಾರಗಳಾದ ಯಕ್ಷಗಾನ, ಹರಿಕಥೆ, ಕಾವ್ಯವಾಚನ, ಪುರಾಣಗಳ ಮೂಲಕ ಜನತಾವೃಕ್ಷದ ತಾಯಿ ಬೇರಿಗೇ ಹರಿದಿವೆ. ಆ ಮೂಲದ್ರವ್ಯವು ವಿಭಿನ್ನ ನೆಲೆಗಳಲ್ಲಿ, ಸೆಲೆಗಳಲ್ಲಿ ಸಾಮಾಜಿಕ ಬದುಕಿನೊಂದಿಗೆ ಮಿಳಿತಗೊಂಡು ಮರುಜೀವ ಪಡೆಯುತ್ತಲೇ ಇವೆ. ಆದುದರಿಂದಲೇ ಈ ಜಿಲ್ಲೆಯಲ್ಲಿ ಸಣ್ಣ ಕತೆಗಳದು ಹುಲುಸಾದ ಫಸಲು.
ಕನ್ನಡ ಸಣ್ಣ ಕತೆಗಳ ಮೂಲಪುರುಷರಾದ ಪಂಜೆಯವರಿಂದ ತೊಡಗಿ ಅಸಂಖ್ಯ ಘನೀಭೂತ ಧಾನ್ಯಗಳು ಇಲ್ಲಿನ ಫಲಭರಿತ ಮಣ್ಣಿನಿಂದ ಪುಟಿದೆದ್ದು ಮೆರಗು ಪಡೆದಿವೆ. ಆ ಧಾನ್ಯರಾಶಿಯಿಂದ ಗಟ್ಟಿ ಬೀಜದ ಐವತ್ತೊಂಬತ್ತನಷ್ಟೇ ಆಯ್ದು ಮರುಬಿತ್ತನೆ ಮಾಡುವ ಸಾಹಸ ಮಾಡಿದ್ದಾರೆ – ಪುತ್ತೂರು ಕರ್ನಾಟಕ ಸಂಘದ ಬೋಳಂತಕೋಡಿ ಈಶ್ವರ ಭಟ್ಟರು.
ಕತೆಗಾರರ ಆಯ್ಕೆ ಕಷ್ಟ; ಕತೆಗಳ ಆಯ್ಕೆ ಇನ್ನೂ ಕಷ್ಟ. ಅಂತಹ ಸಂದಿಗ್ಧದ ನಡುವೆಯೂ ದಕ್ಷಿಣ ಕನ್ನಡ ಜಿಲ್ಲೆಯ ಶತಮಾನದ ಕತೆಗಳು ಬೃಹತ್ ಸಂಪುಟವೊಂದು ಹೊರಬರುತ್ತಿರುವುದು ಸಂಪಾದಕ ಬಿ.ಜನಾರ್ದನ ಭಟ್ಟರ ಅಚಲ ‘ನೇಗಿಲ ಯೋಗಿತ್ವ’ದಿಂದಲೆ.
ಇಲ್ಲಿನ ಕತೆಗಳೆಲ್ಲ ವೈವಿಧ್ಯಮಯ. ಜೀವನಾನುಭವದ ಸಾರಸತ್ವ. ಕರಾವಳಿಯ ಸಂಸ್ಕೃತಿಯನ್ನು ಬಿದಿಬಿಡಿಯಾಗಿಯೂ ಆ ಮೂಲಕ ಇಡಿಯಾಗಿಯೂ ಒಂದು ಹಿಡಿಯಾಗಿಯೂ ಕಟ್ಟಿಕೊಡುವ ಗಂಭೀರ ಪ್ರಯತ್ನವಾಗಿ ಈ ಗ್ರಂಥವನ್ನು ಪರಿಭಾವಿಸಬೇಕು.



There are no comments on this title.

to post a comment.

Click on an image to view it in the image viewer

Local cover image