Bada ಬಾಡ
Material type:
- K894.3 RAVB
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada Literature | K894.3 RAVB (Browse shelf(Opens below)) | Available | 052082 | |
![]() |
St Aloysius Library | Kannada Literature | K894.3 RAVB (Browse shelf(Opens below)) | Available | 054757 |
Browsing St Aloysius Library shelves Close shelf browser (Hides shelf browser)
'ಬಾಡ' ಕಾದಂಬರಿಯ ಎಲ್ಲ ಪುಟಗಳಲ್ಲಿ ದಲಿತರ ಜೀವನದಾರಿದ್ರ ಪುಟಕಟ್ಟಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆ ದಾರಿ, ಈ ದಾರಿ, ನಡು ದಾರಿ, ಹೊಸ ದಾರಿ- ಎಂಬ ನಾಲ್ಕು ಅಧ್ಯಾಯಗಳು ದಲಿತರ ಬದುಕಿನ ಸಾಂಕೇತಿಕ ಅಭಿವ್ಯಕ್ತಿ. ಅವರ ಒಟ್ಟು ಇರವು ಮತ್ತು ಹೋರಾಟ, ಹೋರಾಟದಿಂದಲೇ ಒಂದು ಜೀವನ ರೂಪುಗೊಳ್ಳುವ ಬಗೆ- ಇದನ್ನು ಬಹಳ ಖಚಿತವಾದ ರೀತಿಯಲ್ಲಿ ಹೇಳಿದ್ದೀರಿ. ಕನ್ನಡದಲ್ಲಿ ಈ ರೀತಿಯಾಗಿ ದಲಿತರ ಬಗ್ಗೆ ಇಷ್ಟೊಂದು ಬೃಹತ್ ಪ್ರಮಾಣದ ಕೃತಿ. ಬಂದಿಲ್ಲ. ದೇವನೂರು, ಅರವಿಂದ ಮಾಲಗತ್ತಿ, ಮ. ನ. ಜವರಯ್ಯನವರ ಬರಹಗಳು ಪ್ರಭಾವಶಾಲಿಯಾಗಿದ್ದರೂ ತುಂಬ ಚಿಕ್ಕವು. ಯಾವುದೋ ಒಂದು ಘಟನೆಯ ಅನಾವರಣಕ್ಕೆ ಸೀಮಿತವಾಗಿವೆ. '' ಅಂಥ ಕೃತಿಯಲ್ಲ. ಇದರ ವಿಸ್ತಾರವೇ ಆಶ್ಚರ್ಯ ಹುಟ್ಟಿಸುತ್ತದೆ. ಮೂರು ತಲೆಮಾರಿನ ಜನ ಪಾತ್ರಗಳಾಗುತ್ತಾರೆ. ಕಾರಂತರು 'ಮರಳಿ ಮಣ್ಣಿಗೆ'ಯಲ್ಲಿ ಮೂರು ತಲೆಮಾರಿನ ಬ್ರಾಹ್ಮಣ ಮನೆತನದ ಚಿತ್ರವನ್ನು ಬಹಳ ಸೊಗಸಾಗಿ ನೀಡಿದ್ದಾರೆ. ನೀವು ದಲಿತರ ಜೀವನಕ್ರಮ ವನ್ನು ಹಿಡಿದಿಟ್ಟಿದ್ದೀರಿ. ಮೂರ್ತಿಹೇಳುವ ಹಾಗೆ
'ಸುಂದರಂನ ಯಾಂತ್ರೀಕರಣ, ನಿನ್ನ ವೈಜ್ಞಾನೀಕರಣ ಅಂದಾಗ ಬಡ ಮಜೂರರು ದಾರಿಗೆ ಬೀಳುತ್ತಾರೆ; ಸಾಯುತ್ತಾರೆ' ಎಂಬಂಥ ಆಧುನಿಕ ಧೋರಣೆಯೂ 'ಬಾಡ'ದಲ್ಲಿ ಕೆಲಸಮಾಡಿರುವುದರಿಂದ, ವಸ್ತು ಮತ್ತು ಹರಹುವಿನ ದೃಷ್ಟಿಯಿಂದ ಇದೊಂದು ದೊಡ್ಡ ಕೃತಿ ಎಂಬುದರಲ್ಲಿ ಎರಡು ಮಾತಿಲ್ಲ.
- ಡಾ| ಪುರುಷೋತ್ತಮ ಬಿಳಿಮಲೆ
There are no comments on this title.