Kargilnalli hadinelu dinagalu (Record no. 114180)
[ view plain ]
000 -LEADER | |

fixed length control field | 09429nam a2200217Ia 4500 |
003 - CONTROL NUMBER IDENTIFIER | |
control field | OSt |
005 - DATE AND TIME OF LATEST TRANSACTION | |
control field | 20250609145243.0 |
008 - FIXED-LENGTH DATA ELEMENTS--GENERAL INFORMATION | |
fixed length control field | 210210b1999 xxu||||| |||| 00| 0 eng d |
040 ## - CATALOGING SOURCE | |
Transcribing agency | AL |
041 ## - LANGUAGE CODE | |
Language code of text/sound track or separate title | Kannada |
082 ## - DEWEY DECIMAL CLASSIFICATION NUMBER | |
Classification number | 070.433K RAVK |
100 ## - MAIN ENTRY--PERSONAL NAME | |
Personal name | RAVI BELAGERE |
Dates associated with a name | ರವಿ ಬೆಳಗೆರೆ |
9 (RLIN) | 213523 |
245 ## - TITLE STATEMENT | |
Title | Kargilnalli hadinelu dinagalu |
Remainder of title | ಕಾರ್ಗಿಲ್ ನಲ್ಲಿ ಹದಿನೇಳು ದಿನಗಳು |
260 ## - PUBLICATION, DISTRIBUTION, ETC. | |
Place of publication, distribution, etc. | Bengaluru |
Name of publisher, distributor, etc. | Bhavana Prakashana |
Date of publication, distribution, etc. | 1999 |
300 ## - PHYSICAL DESCRIPTION | |
Extent | iv,140 |
520 ## - SUMMARY, ETC. | |
Summary, etc. | ಕಾರ್ಗಿಲ್ ಯುದ್ದ…. ಈ ಪದವನ್ನು ಕೇಳಿದರೆ ಸಾಕು ಮೈ ಜುಮ್ಮೆನ್ನುವದರಲ್ಲಿ ಸಂದೇಹವಿಲ್ಲ…. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಡೆದ ಘನಘೋರವಾದ ಯುದ್ದವಿದು…. ನಮ್ಮ ದೇಶದ ಭಾಗವಾದ ಕಾರ್ಗಿಲ್ ನಲ್ಲಿ ಅಕ್ರಮವಾಗಿ ನುಗ್ಗಿ, ನಮ್ಮನ್ನೇ ಸೋಲಿಸಲು ಯತ್ನಿಸಿತು ಶತ್ರು ಸೈನ್ಯ… ಅವರನ್ನು ಸದೆ ಬಡಿದು ನಿಂತ ರಾಷ್ಟ್ರ ನನ್ನದು…. ನಾನು 9ನೇ ತರಗತಿಯಲ್ಲಿರುವ ಸಮಯದಲ್ಲಿ ನಡೆಯಿತು ಈ ಯುದ್ದ… ಅಪಾರ ನಷ್ಟವಾದರೂ ಶತ್ರುವನ್ನು ಬಡಿದೊಡಿಸಿದ್ದರು ನಮ್ಮ ವೀರ ಯೋಧರು….
ಈ ಪುಸ್ತಕವನ್ನು ಓದುವಾಗ ಆ ಹಳೇ ನೆನಪುಗಳು ಮರುಕಳಿಸಿದವು…. ದಿನೇ ದಿನೇ ನ್ಯೂಸ್ ನ್ನು ನೋಡಿ ದೇವರಲ್ಲಿ ಮೊರೆಯಿಟ್ಟು ಕಣ್ಣೀರಿಟ್ಟ ದಿನಗಳವು…. ಎಲ್ಲೆಡೆಯೂ ನಮಗಾಗಿ ವೀರ ಮರಣವನ್ನಪ್ಪಿದ ಯೋಧರಿಗಾಗಿ ಶ್ರದ್ಧಾಂಜಲಿ ಮತ್ತು ಅವರ ಕುಟುಂಬಗಳಿಗಾಗಿ ಹಣ ಸಂಗ್ರಹಣೆ… ನಾನು ಮತ್ತು ನನ್ನ ಗೆಳೆಯರು ಇದರಲ್ಲಿ ಪಾಲ್ಗೊಂಡು ನಮ್ಮಿಂದಾದ ಧನಸಹಾಯವನ್ನು ಮಾಡಿದೆವು…
ಅದೇ ಸಮಯದಲ್ಲಿ ಚೆನೈಗೆ ರೈಲಿನಲ್ಲಿ ನಾನು ಮತ್ತು ನನ್ನ ಪೋಷಕರು ಪ್ರಯಾಣಿಸುವಾಗ, ಅದೇ ಬೋಗಿಯಲ್ಲಿ ಒಂದು ಸೈನಿಕ ತಂಡವು ಬರುತ್ತಿತ್ತು… ಜಾಗವಿರಲಿಲ್ಲ… ಆದರೆ ಕೆಲವು ಸಹಪ್ರಯಾಣಿಕರು ಎದ್ದು ನಿಂತು ಅವರಿಗೆ ತಮ್ಮ ಜಾಗವನ್ನು ಬಿಟ್ಟು ಕೊಟ್ಟರು… ಅದನ್ನು ಆ ಸೈನಿಕರು ಬಹು ಸಂಕೋಚದಿಂದ ಸ್ವೀಕರಿಸಿದರು…. ನಮ್ಮ ಕುಟುಂಬವನ್ನು ಬಿಟ್ಟು, ಎಲ್ಲಾ ಆಸೆಗಳನ್ನು ತ್ಯಾಗ ಮಾಡಿ, ಎಲ್ಲೋ ಗಡಿ ಕಾಯುವ ನಮಗೇನು ಲಾಭವಿದೆ ಎಂದು ಹಲವು ಬಾರಿ ನಾವು ಚಿಂತಿಸಿದ್ದುಂಟು… ಆದರೆ ನಮ್ಮನ್ನು ಇಷ್ಟು ಗೌರವಭಾವದಿಂದ ಕಾಣುವ, ನಮ್ಮನ್ನು ಮಾತ್ರವಲ್ಲದೇ ನಮ್ಮ ಸಂಸಾರದವರಿಗಾಗಿ ಕಣ್ಣೀರಿಡುವ ನಿಮಗಾಗಿ, ನಮ್ಮ ಭಾರತಾಂಬೆಗಾಗಿ ನಾವು ಸಾಯಲು ಸಿದ್ದ… ಎಂದೇಳಿದ ಅವರ ಮಾತು ಇಂದಿಗೂ ನನ್ನ ಕಿವಿಯಲ್ಲಿ ಗುಯ್ಯುಂ ಗುಟ್ಟುತ್ತಿದೆ…. ಮತ್ತೊಬ್ಬ ಪ್ರಯಾಣಿಕರು ಸರ್, ನಿಮ್ಮದೇ ಬಹು ದೊಡ್ಡ ತ್ಯಾಗ… ನಾವೆಲ್ಲರೂ ಸ್ವಾರ್ಥಿಗಳು… ನಿಮ್ಮನ್ನು ಮುಂದೆ ನಿಲ್ಲಿಸಿ, ನಮ್ಮ ಪ್ರಾಣವನ್ನು ರಕ್ಷಿಸಿ ಕೊಳ್ಳುವ ಹೇಡಿಗಳು ನಾವು…. ಎಂದೇಳಿದಾಗ, ಒಬ್ಬ ಯೋಧ ಹಾಗೆಲ್ಲಾ ಹೇಳಬೇಡಿ, ಭಾರತವನ್ನು ರಕ್ಷಿಸುವುದು ನಮ್ಮ- ನಿಮ್ಮೆಲ್ಲರ ಕರ್ತವ್ಯ… ನಾವು ಗಡಿಯಲ್ಲಿ ಕಾವಲಿಗೆ ನಿಂತರೇ, ಇಲ್ಲಿ ನೀವು ಬೇರೆ ಬೇರೆ ರೀತಿಯಲ್ಲಿ ಭಾರತಾಂಬೆಯನ್ನು ಕಾಪಾಡುತ್ತಿದ್ದೀರಾ… ನಾವೆಲ್ಲರೂ ಭಾರತಾಂಬೆಯ ಮಕ್ಕಳು… ಎಂದೇಳಿದ ಆ ವೀರ ಯೋಧ ಸಹೋದರನಿಗೆ ನನ್ನ ಹೃತ್ಪೂರ್ವಕ ನಮನಗಳು….
ಆ ಸಮಯದಲ್ಲೇ ಆ ಯೋಧ ನಮ್ಮೆಲ್ಲರಿಗೂ ಒಂದು ಕಥೆಯನ್ನು ಹೇಳಿದರು…..
ಯಾವ ದೇಶದ ಮೇಲೆ ಮತ್ತು ಯಾವ ಸಂದರ್ಭವೆಂಬುದು ನನಗೆ ನೆನಪಿಲ್ಲ… ಕ್ಷಮೆಯಿರಲಿ….
ಒಮ್ಮೆ ಬೆಳಿಗ್ಗೆ ಇವರೆಲ್ಲಾ ಯಥಾಪ್ರಕಾರ ಎದ್ದು ತಮ್ಮ ತಮ್ಮ ಕೆಲಸಗಳನ್ನು ಪೂರೈಸಿಕೊಂಡು… ಅವರವರ ಕ್ಯಾಬಿನ್ಗೆ ತೆರಳುವ ಸಮಯದಲ್ಲಿಯೇ ಇವರಿಗೆ ತಿಳಿದದ್ದು ಇವರಲ್ಲೊಬ್ಬ ಕಾಣೆಯೆಂದು…. ಸುತ್ತಮುತ್ತ ಕಾಡು ಪ್ರದೇಶ… ಎಷ್ಟು ಹುಡುಕಿದರೂ ಸಿಗಲಿಲ್ಲ… ಸಂಜೆಯಾದರೂ ಆ ಯೋಧನ ಪತ್ತೆಯಿಲ್ಲ… ಕತ್ತಲಾವರಿಸಲು ಪ್ರಾರಂಭಿಸಿದಾಗ, ಇವರ ಕಮಾಂಡರಿಗೆ ಒಂದು ಸಂದೇಶ ಬರುತ್ತದೆ… ಒಬ್ಬ ಯೋಧನನ್ನು ಸೆರೆಯಿಡಿದಿದೆ ಶತ್ರು ಸೈನ್ಯ…. ಈ ಸುದ್ದಿಯನ್ನು ಕೇಳಿದವರಿಗೆಲ್ಲಾ ಶಾಕ್… ಯಾವ ಯುದ್ದವೂ ಇಲ್ಲ… ಸುತ್ತಮುತ್ತಲಿನಲ್ಲಿ ಶತ್ರುಗಳ ಓಡಾಟದ ಸಂದೇಹವೂ ಇವರಿಗಿರಲಿಲ್ಲ… ಒಮ್ಮೆಲೇ ಆಘಾತಕ್ಕೊಳಗಾದರು ನಮ್ಮವರು…. ಈಗೇನು ಮಾಡುವುದೆಂದು ಯೋಚಿಸುವಷ್ಟರಲ್ಲಿಯೇ ದೊಡ್ಡ ಅವಘಡವೊಂದು ನಡೆದೇ ಬಿಟ್ಟಿತಂತೆ…. ಆ ಯೋಧನನ್ನು ಹಿಂಸಿಸಿ ಕೊಂದು ನಮ್ಮ ಗಡಿಯಲ್ಲೆಸೆದು ತನ್ನ ಕ್ರೂರತನವನ್ನು ಮೆರೆದಿದೆ ಆ ಶತ್ರು ಸೈನ್ಯ…. ಯಾವ ರೀತಿ ಹಿಂಸಿಸಿದರೆಂದು ಗೊತ್ತೇ….. ಆ ಯೋಧನ ಗುದದ್ವಾರದ ಮೂಲಕ ಬಿಯರ್ ಬಾಟಲನ್ನು ಒಳಕ್ಕೆ ತಳ್ಳಿ……. ಆತನ ಹೊಟ್ಟೆಗೆ ಕೋಲಿನಿಂದ ಒಡೆದು…… ಹೊಟ್ಟೆಯಲ್ಲಿ ಬಾಟಲ್ ಚೂರು ಚೂರಾಗಿ ಪುಡಿ ಮಾಡಿ…… ಸಾಯಿಸಿದ್ದಾರೆ…… ಉಫ್…. ಖಂಡಿತಾ ಕೇಳಿದ ದಿನದಂದು ಎಷ್ಟು ನಡುಗಿ, ಕಣ್ಣೀರು ಸುರಿಸಿದೇನೋ…. ಈಗ ಬರಿಯುವಾಗಲೂ ಅದೇ…….
ನನ್ನ ಪ್ರೀತಿಯ ಓದುಗರೇ….. ಎಷ್ಟು ನರಕದ ಜೀವನ ನಮ್ಮ ಸೈನಿಕರದ್ದು ಒಮ್ಮೆ ಯೋಚಿಸಿ….
ನಿಮಗೇ ನಿಜವಾದ ಪ್ರೀತಿ ನಮ್ಮ ಸೈನಿಕರ ಮೇಲಿದ್ದರೆ ಈ ಪುಸ್ತಕವನ್ನು ಓದಿ… ಎದೆಗುಂದದೇ…. ಕಣ್ಣೀರಿನ ಹೊಳೆಯು ಹರಿಯುವುದರಲ್ಲಿ ಸಂದೇಹವಿಲ್ಲ….
ಮಗನನ್ನು ಯುದ್ದಕ್ಕೆ ಕಳುಹಿಸಿ, ಅವನು ಸುರಕ್ಷಿತವಾಗಿ ಬರಲೆಂದು ಆಶಿಸುವ ತಾಯಿಗೂ ಮತ್ತು ಆತನ ಪತ್ನಿಗೂ ಈ ಪುಸ್ತಕವನ್ನು ಅರ್ಪಿಸಿದ್ದಾರೆ…. ಲೇಖಕರು..
ಅದೇ ರೀತಿ ನಾ ಬರೆದ ಈ ಪುಟ್ಟ ಬರಹವು ನಮ್ಮ ಹೆಮ್ಮೆಯ ವೀರ ಸೈನಿಕರಿಗೆ ಸಮರ್ಪಣೆ….
ಈ ಪುಸ್ತಕದಲ್ಲಿ ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ ವೀರರನ್ನು ಲೇಖಕರು ಸಂದರ್ಶಿಸಿ, ಅವರ ಅನುಭವಗಳನ್ನು ಮತ್ತು ಆ ಸ್ಥಳದಲ್ಲಿ ನಡೆದ ಲೇಖಕರ ಅನುಭವಗಳನ್ನು ನಮ್ಮೊಂದಿಗೆ ಹಂಚಿ ಕೊಂಡಿದ್ದಾರೆ… ಯೋಧರ ವೀರ ಸಾಹಸಗಳು ಮತ್ತು ನಮ್ಮ ದೇಶದ ಸ್ಥಿತಿ ಗತಿಗಳನ್ನು ತಿಳಿದು ಕೊಳ್ಳಲು ಒಂದು ಸುವರ್ಣಾವಕಾಶ…. |
650 ## - SUBJECT ADDED ENTRY--TOPICAL TERM | |
Topical term or geographic name entry element | Kargil |
9 (RLIN) | 213524 |
690 ## - LOCAL SUBJECT ADDED ENTRY--TOPICAL TERM (OCLC, RLIN) | |
Topical term or geographic name as entry element | Journalism |
9 (RLIN) | 213525 |
906 ## - LOCAL DATA ELEMENT F, LDF (RLIN) | |
a | SG03522 |
942 ## - ADDED ENTRY ELEMENTS (KOHA) | |
Source of classification or shelving scheme | Dewey Decimal Classification |
Koha item type | Book |
Withdrawn status | Lost status | Source of classification or shelving scheme | Damaged status | Not for loan | Collection code | Home library | Current library | Shelving location | Date acquired | Source of acquisition | Cost, normal purchase price | Total Checkouts | Full call number | Barcode | Date last seen | Price effective from | Koha item type |

Dewey Decimal Classification | Journalism | St Aloysius Library | St Aloysius Library | 02/17/2021 | Athree Book Centre, Mangalore-01. | 40.00 | 070.433K RAVK | SG03522 | 02/17/2021 | 02/17/2021 | Special Grants |