Milarepa modalagi male bidda neladalli ಮಿಲರೇಪ ಮೊದಲಾಗಿ ಮಳೆ ಬಿದ್ದ ನೆಲದಲ್ಲಿ

SHIVAPRAKASHA (H S) ಶಿವಪ್ರಕಾಶ (ಎಚ್ ಎಸ್)

Milarepa modalagi male bidda neladalli ಮಿಲರೇಪ ಮೊದಲಾಗಿ ಮಳೆ ಬಿದ್ದ ನೆಲದಲ್ಲಿ - Bengaluru Priyadarshini Prakashana 1991 - xvi,80

ತಾರವ್ವ ಮಳೆಯ ಎಳೆಎಳೆಯ ಎದೆ ಹಾಲ
ಸಿಂಪಡಿಸು ಗುಡ್ಡಕ್ಕೆ ನವಲಗುಂದಕ್ಕೆ
ಗದಗಕ್ಕೆ ಗಿರಣಿಗಳು ಕಿರುಗುಡುವ ಹುಬ್ಬಳ್ಳಿ ನಗರಕ್ಕೆ
ತಾರೆಮಂಡಲ ಬುಗರಿ ಕೆದರಿರುವ ವ್ಯೋಮಕ್ಕೆ
ತಾರವ್ವ ಚಂದ್ರವ್ವ ಮುಗಿಲವ್ವ ಭುಗಿ ಭುಗಿಲವ್ವ
ಎದೆಯಲ್ಲಿ, ಕರುಳಲ್ಲಿ, ನೆಲದಲ್ಲಿ
ಏಸು ಕಾವಿತ್ತವ್ವ ಮಳೆ ಬಿದ್ದ ನೆಲದಲ್ಲಿ
ಕಾವು ತಡಿಯದೆ ಹಾವೇಸು ಹುತ್ತುವ ಬಿಟ್ಟು
ನೆಲದುದ್ದ ನೆಲದಗಲ ಹೊರಳಿದುವವ್ವಾ.

K894.1 SHIM