Hosagannada sahityada udaya kala. ಹೊಸಗನ್ನಡ ಸಾಹಿತ್ಯದ ಉದಯಕಾಲ

DHARAVADAKARA (Ra Ya) ಧಾರವಾಡಕರ (ರಾ.ಯ.)

Hosagannada sahityada udaya kala. ಹೊಸಗನ್ನಡ ಸಾಹಿತ್ಯದ ಉದಯಕಾಲ - Dharavada Karnataka Vishvavidyalaya 1975 - v,653

‘ಹೊಸಗನ್ನಡ ಸಾಹಿತ್ಯದ ಉದಯಕಾಲ’ ಉತ್ತರ ಕರ್ನಾಟಕವನ್ನು ಅನುಲಕ್ಷಿಸಿ ರಾ.ಯ. ಧಾರವಾಡಕರ ಅವರ ಕೃತಿ. ಕನ್ನಡ ಪುಸ್ತಕ ಪ್ರಕಾಶನೋದ್ಯಮ ಇಂದು ಹುಲುಸಾಗಿ ಬೆಳೆದಿದೆ. ಅಧ್ಯಕ್ಷೀಯ ನುಡಿಯಲ್ಲಿ ಕೃತಿಯ ಕುರಿತು ಬರೆಯುತ್ತಾ. ವರ್ಷಕ್ಕೆ ಪ್ರಥಮಾವೃತ್ತಿಯ ಸುಮಾರು ಮೂರು ಸಾವಿರದಷ್ಟು ಪುಸ್ತಕಗಳು ಪ್ರಕಟವಾಗುತ್ತಿವೆ. ಅವಲ್ಲದೆ ಸಹಸ್ರಾರು ಮರುಮುದ್ರಣಗಳು ಹಾಗೂ ಲೆಕ್ಕಕ್ಕೆ ಬಾರದ ಸಾವಿರಾರು ಪುಸ್ತಕಗಳು ಪ್ರಕಟಣೆಯಾಗುತ್ತಿವೆ. ಈ ಉದ್ಯಮಕ್ಕೆ ಸಾರ್ವಜನಿಕ ಕ್ಷೇತ್ರದ ಕೊಡುಗೆಯೂ ಕಡಿಮೆಯಲ್ಲ. ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳು, ವಿವಿಧ ಅಕಾಡೆಮಿಗಳು, ಪುಸ್ತಕ ಪ್ರಾಧಿಕಾರ, ಸಾಹಿತ್ಯ ಪರಿಷತ್ತಿನಂಥ ಸಾರ್ವಜನಿಕ ಸಂಸ್ಥೆಗಳು ನಿರಂತರವಾಗಿ ಪುಸ್ತಕಗಳನ್ನು ಪ್ರಕಟಿಸುತ್ತಲಿವೆ. ಖಾಸಗಿ ಪ್ರಕಾಶನ ಸಂಸ್ಥೆಗಳಂತೂ ಪೈಪೋಟಿಯಿಂದಲೇ ಪುಸ್ತಕ ಪ್ರಕಾಶನದಲ್ಲಿ ತೊಡಗಿವೆ. ಈ ಎಲ್ಲಾ ಪ್ರಕಾಶನ ಸಂಸ್ಥೆಗಳು ಬಹುಮಟ್ಟಿಗೆ ಸಮಕಾಲೀನ ಕನ್ನಡ ಸಾಹಿತ್ಯ ಹಾಗೂ ವಿವಿಧ ಪ್ರಕಾರದ ಬರವಣಿಗೆಗಳ ಪ್ರಕಟಣೆಗೆ ಒತ್ತು ನೀಡುತ್ತಿರುವುದು ಸಹಜವೇ ಆಗಿದೆ. ಆದರೆ ಸಮಕಾಲೀನ ಹೊಸ ಚಿಗುರಿಗೆ ಆಗಿಂದಾಗ್ಗೆ ಹಳೇ ಬೇರುಗಳ ರಸ ಹಾಗೂ ಶಕ್ತಿಯ ಸ್ಪರ್ಶವಾಗಬೇಕಾದುದು ಅತ್ಯಗತ್ಯ. ಈ ದಿಸೆಯಲ್ಲಿ ಪರಿಷತ್ತು, ಕನ್ನಡ ಓದುಗರು ಮತ್ತು ಸಾಹಿತ್ಯಾಸಕ್ತರು ಎಂದಿಗೂ ಮರೆಯಬಾರದ ಲೇಖಕರು ಹಾಗೂ ಕೃತಿಗಳನ್ನು ಮತ್ತೆ ಮರುಮುದ್ರಿಸಿ, ಅವರ ಮುಂದಿರುವ ಮೂಲಕ, ಒಂದು ನೂತನ ಪರಂಪರೆಯನ್ನು ಪ್ರಾರಂಭಿಸಿರುತ್ತದೆ. ಈ ಕಾರ್ಯಕ್ಕೆ ವಿಜಾಪುರದ 79ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಒಂದು ಸುಸಂದರ್ಭವಾಗಿ ಒದಗಿ ಬಂದಿದೆ. ಈ ಸರಣಿಯಲ್ಲಿ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಹತ್ತ್ವದ ಸ್ಥಾನವನ್ನು ಪಡೆದಿರುವ ಇಪ್ಪತ್ತೈದು ಕೃತಿಗಳನ್ನು ಆಯ್ದು ಪ್ರಕಟಿಸಲಾಗುತ್ತಿದೆ. ಇದೊಂದು ಪುಟ್ಟ ಪ್ರಯತ್ನವೆಂಬ ನಮ್ರ ಭಾವನೆ ನನಗಿದೆ ಎಂದು ತಿಳಿಸಿದ್ದಾರೆ.

K894.9 DHAH