Brect - parichaya ಬ್ರೆಕ್ಟ್-ಪರಿಚಯ.

RAJASHEKHARA (G) ಜಿ.ರಾಜಶೇಖರ

Brect - parichaya ಬ್ರೆಕ್ಟ್-ಪರಿಚಯ. - Sagara Ninasam Rangashikshara Kendra 1985 - 42

ಬರ್ಟೋಲ್ಟ್ ಬ್ರೆಕ್ಟ್ (೧೮೯೮-೧೯೫೬), ಕೆಲವರ ಪ್ರಕಾರ- ಶೇಕ್ಸ್ಪಿಯರ್ ನಂತರ ಕಂಡುಬಂದ ಅತ್ಯಂತ ಶ್ರೇಷ್ಟ ನಾಟಕಕಾರ, ನಿರ್ದೇಶಕನೂ ಆಗಿದ್ದ ಬ್ರೆಕ್ಟ್ 'ಎಪಿಕ್ ರಂಗಭೂಮಿ'ಯ ಆದ್ಯ ಪ್ರವರ್ತಕ, ಅವನು ಜರ್ಮನ್ ಭಾಷೆಯ ಶ್ರೇಷ್ಟ ಕವಿ ಕೂಡಾ, ಜಗತ್ತಿನ ಎಲ್ಲೆಡೆ ಅವನಿಗೆ ಅಭಿಮಾನಿಗಳು ಇದ್ದಾರೆ.

ಬ್ರೆಕ್ಸ್ನನ್ನು ವಿರೋಧಿಸುವವರ ಸಂಖ್ಯೆಯೂ ಸಣ್ಣದಲ್ಲ. ಅವನ ನಾಟಕಗಳನ್ನು ಸುಟ್ಟು, ಅವನನ್ನು ಕೊಲ್ಲಲು ಹವಣಿಸಿದ ಜರ್ಮನಿಯ ನಾಝಿಗಳು ಮತ್ತು ಅವನನ್ನು ವಿಚಾರಣೆಗೆ ಒಳಪಡಿಸಿದ ಅಮೆರಿಕದ ಶಾಸಕರಿಂದ ಹಿಡಿದು, ಕಮ್ಯುನಿಸಂನ ಆಜನ್ಮ ವೈರಿಗಳು- ಹೀಗೆ ನಾನಾ ವಿಧದ ಜನ ಕಾಣಸಿಗುತ್ತಾರೆ. ಬ್ರೆಕ್ಟ್ ಕಮ್ಯುನಿಸಂನ ತತ್ವದಲ್ಲಿ ಗಾಢನಿಷ್ಟೆ ಉಳ್ಳವನಾದರೂ ಕಮ್ಯುನಿಸ್ಟ್ ಅಧಿಕಾರಶಾಹಿಯ ಜೊತೆಗೂ ಅವನ ಸಂಬಂಧ ಹಿತಕರವಾಗಿರಲಿಲ್ಲ. ಯಾವುದೇ ವ್ಯವಸ್ಥೆಗಾದರೂ ಅಪಥ್ಯವಾಗುವ ಬಂಡುಕೋರತನ, ಅವನ ಬದುಕಿನ ಮೂಲದ್ರವ್ಯವಾಗಿದೆ. ಇವುಗಳ ಹಿನ್ನೆಲೆಯಲ್ಲಿ ಬ್ರೆಕ್ಟ್ ನ ವ್ಯಕ್ತಿತ್ವ, ವಿಚಾರಧಾರೆ, ಸಾಹಿತ್ಯವನ್ನು ಅರಿಯಲು ಈ ಪುಸ್ತಕ ಉತ್ತಮ ಕೈಪಿಡಿಯಾಗಿದೆ.

K894.9 RAJB