Rupantara ರೂಪಾಂತರ

KAFKA (Franz). ಕಾಫ್ಕ ಫ್ರಾಂಜ್

Rupantara ರೂಪಾಂತರ - Maisuru Nelamane Prakashana 1978 - 109

ಫ್ರಾಂಜ್ ಕಾಫ್ಕ ನ ಪ್ರಸಿದ್ಧ ಕೃತಿ ‘ಮೆಟಮಾರ್ಫಾಸಿಸ್’ ನ ಅನುವಾದ ‘ರೂಪಾಂತರ’ ,ಗಿರಿ ಯವರು ಇದನ್ನು ಕನ್ನಡಕ್ಕೆ ೧೯೭೭ ರಲ್ಲಿ ಅನುವಾದಿಸಿದ್ದರು.
ಒಂದು ದೈತ್ಯ ಕೀಟವಾಗಿ ಹೋದ ಮನುಷ್ಯ. ಆ ಸ್ಥಿತಿಯನ್ನು ಸ್ವೀಕರಿಸುವ ಅನಿವಾರ್ಯತೆ. ಅದರ ವಿರುದ್ಧ ಸೆಣೆಸುವ ಅನಿವಾರ್ಯತೆ. ಹುಳುವಾಗಿ ಹೋದರೂ, ಆ ಅಸಹಾಯಕತೆಯಲ್ಲಿಯೇ ಪ್ರೀತಿಸುವುದನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವವನ ಕಥೆ. ಬಾಗಿಲಿನ ಹಿಂದೆ ಭಯದಲ್ಲಿ, ತಬ್ಬಲಿಯಾಗಿ, ತ್ಯಕ್ತನಾದವನ ಕಥೆ: ಮೆಟಮಾರ್ಫಸಿಸ್. ನಬಕೋಫ್, ಮಾರ್ಕ್ವೆಝ್ ರಿಂದ “೨೦ನೇ ಶತಮಾನದ ಮಹಾನ್ ಬರಹಗಾರ” ಎಂದು ಕರೆಸಿಕೊಂಡ, ಸಣ್ಣವಯಸ್ಸಿನಲ್ಲಿಯೇ ತೀರಿಹೋದ ಫ್ರಾಂಜ್ ಕಾಫ್ಕಾನ ಮೊದಲ ಮಹತ್ವದ ಕೃತಿ.ಫ್ರಾನ್ಸ್ ಕಾಫ್ಕ ಇಲ್ಲಿ ಅಸ್ತಿತ್ವದ ಅಸಂಬದ್ಧತೆ, ಆಧುನಿಕ ಬದುಕಿನಲ್ಲಿನ ಪರಕೀಯ ಭಾವ, ಸರ್ವಾಧಿಕಾರದ ಕ್ರೌರ್ಯದ ಸುತ್ತ ಕೌಶಲ್ಯಪೂರ್ಣವಾಗಿ ಬಲೆ ಹೆಣೆಯುತ್ತಾ ಹುಳುವಾಗಿ ರೂಪಾಂತರಗೊಂಡ ಮುಖ್ಯ ಪಾತ್ರ ಗ್ರಿಗೋರ್ ಸಾಂಸನ ಮನುಷ್ಯತ್ವದ ಹುಡುಕಾಟ, ಒದ್ದಾಟದ ಕತೆಯನ್ನು ಹೇಳುತ್ತಾನೆ. ಎಪ್ಪತೈದರ ಹರೆಯದ ಸ್ವತಂತ್ರ ಭಾರತ ನಿಧಾನಕ್ಕೆ ಪ್ರಜಾಧಿಕಾರದಿಂದ ಸರ್ವಾಧಿಕಾರದ ವಿಷವರ್ತುಲದಲ್ಲಿ ಬೀಳುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಗ್ರಿಗೋರ್ ಸಾಂಸ ನಮಗೆ ಹಿಂದೆಂದಿಗಿಂತಲೂ ಹೆಚ್ಚು ಆಪ್ತ ಎನಿಸುತ್ತಾನೆ. ಬಿಡುಗಡೆಯಾದ ನೂರು ವರುಷಗಳ ನಂತರವೂ ಸೂಜಿಗಲ್ಲಿನಂತೆ ಆಕರ್ಷಿಸುವ ಈ ಕಾದಂಬರಿ ವಿಶ್ವ ಸಾಹಿತ್ಯದ ಅಮರ ಕೃತಿಗಳಲ್ಲೊಂದಾಗಿದೆ.


Metamorphosis

K894.3 KAFR