Ombattu narabhakshakagalu mattu ondu pundu ane: ಒಂಬತ್ತು ನರಭಕ್ಷಕಗಳು ಮತ್ತು ಒಂದು ಪುಂಡು ಆನೆ

KENNETH ANDERSON: ಕೆನ್ನೆತ್ ಆಂಡರ್ಸನ್

Ombattu narabhakshakagalu mattu ondu pundu ane: ಒಂಬತ್ತು ನರಭಕ್ಷಕಗಳು ಮತ್ತು ಒಂದು ಪುಂಡು ಆನೆ - Maisuru Suruchi Prakashana 1979 - 260,xvi

ಒಂಭತ್ತು ನರಭಕ್ಷಕಗಳು ಮತ್ತು ಒಂದು ಪುಂಡು ಆನೆ:

ಹಳ್ಳಿಯವರು ಹೊತ್ತು ಮುಳುಗುವಷ್ಟರಲ್ಲಿ ತಮ್ಮ ಮನೆಯ ಬಾಗಿಲನ್ನು ಭದ್ರಪಡಿಸಿ ಒಳಗೆ ಸೇರಿಕೊಂಡರು. ನನ್ನ ಮಂಡಿಯ ಮೇಲೆ ಬಾರುಮಾಡಿ ಕುದುರೆಯನ್ನು ಸಿದ್ಧಪಡಿಸಿದ ರೈಫಲ್ ಇಟ್ಟು ಕೊಂಡು ಎರಡು ಜೋಪಡಿಗಳ ಮಧ್ಯೆ ಕುರ್ಚಿಯಲ್ಲಿ ನಾನೊಬ್ಬನೇ ಕುಳಿತುಕೊಂಡೆ.
ರೈಫಲ್ ಹಿಡಿದುಕೊಂಡು ನಾನು ಸುತ್ತಲೂ ನೋಡಿದೆ. ಪಾಳಾದ ಊರಿನ ಬೀದಿಯ ಮೊದಲಿಂದ ಕೊನೆಯವರೆಗೆ ನನ್ನ ಕಣ್ಣು ದೃಷ್ಟಿಸುತ್ತಿ ದ್ದು ವು. ಚಿರತೆಯ ಚಲನೆಗಳನ್ನು ನೋಡಿದ ಕಾಡಿನ ಪಕ್ಷಿಪ್ರಾಣಿಗಳ ಮುನ್ನೆ ಚ್ಚರಿಕೆಯ ಕೂಗನ್ನು ಕಾಡಿನಲ್ಲಿದ್ದಾಗ ನಾನು ನಂಬಿಕೊಳ್ಳಬಹುದಾಗಿತ್ತಾ ದುದರಿಂದ ಆ ಸಮಯದಲ್ಲಿ ನನಗೆ ಕಾಡು ಸ್ವಾಗತಾರ್ಹವಾಗಿತ್ತು. ಅಲ್ಲಿ ಎಲ್ಲವೂ ಬಹು ನಿಶ್ಯಬ್ದವಾಗಿದ್ದುವು, ಊರಿಗೆ ಊರೇ ಪೂರ್ತಿಯಾಗಿ ನಿರ್ಜನ ವಾಗಿದ್ದಿರಬೇಕು. ಏಕೆಂದರೆ ನನ್ನ ಮರಣವನ್ನೂ ಚಿರತೆಗೆ ಮತ್ತೊಬ್ಬ ಬಲಿ ಯಾದುದನ್ನು ಘೋಷಿಸುವ ನನ್ನ ಚೀತ್ಕಾರವನ್ನೂ ಕೇಳಲು ಮುಚ್ಚಿದ ಬಾಗಿಲುಗಳ ಹಿಂದೆ ಆಲಿಸುತ್ತ ಮಲಗಿರುವರೆಂದು ನನಗೆ ತಿಳಿದಿದ್ದ ಬಹು ಮಂದಿ ಹಳ್ಳಿಯವರಿಂದ ಒಂದಿನಿತೂ ಸಪ್ಪಳವಾಗಲಿಲ್ಲ.
* ಬಹುಮಟ್ಟಿಗೆ ಎದುರುಬದುರು ನಿಂತು ಸೆಣಸಾಡಿದ ಅನೇಕ ವೇಳೆ ಕತ್ತಲೆಯಲ್ಲಿ ಪೈಶಾಚಿಕ ಯುಕ್ತಿಯ ನರಭಕ್ಷಕ ಹುಲಿ ಚಿರತೆಗಳೊಡನೆ ಹೋರಾ ಡಿದ ಅವರ ಕಥೆಗಳು ರೋಮಾಂಚಕಾರಿಯಾಗಿವೆ....... ನಾಟಕೀಯವಾಗಿ ವರ್ಣಿತವಾಗಿವೆ........ಅಡವಿಯ ಹಿನ್ನೆಲೆಯ ಉದ್ವೇಗ ತುಡಿತಗಳು ಚತುರತೆ ಯಿಂದ ಚಿತ್ರಿತವಾಗಿವೆ........”
-ಸ್ಪೆಕ್ಟೇಟರ್

ವಿಷಯ ಸೂಚಿಕೆ:
ಮುನ್ನುಡಿ,
ಮೊದಲ ಮಾತು,
ಸ್ಪೆಕ್ಟೇಟರ್ ಪತ್ರಿಕೆಯ ಅಭಿಪ್ರಾಯ,
೧. ಚೌಳಗೆರೆಯ ನರಭಕ್ಷಕ,
೨. ಗುಮ್ಮಳಾಪುರದ ಕಪ್ಪು ಮಚ್ಚೆಯ ದೆವ್ವ,
೩. ಚಾಮಲ ಕಣಿವೆಯ ಪಟ್ಟೆ ಹುಲಿಯ ಭಯೋತ್ಪಾದನೆ,
೪. ಹೊಸದುರ್ಗ-ಹೊಳಲಕೆರೆಯ ನರಭಕ್ಷಕ,
೫. ಪನಪಟ್ಟಿಯ ಪುಂಡು ಆನೆ,
೬. ಸೇಗೂರಿನ ನರಭಕ್ಷಕ,
೭. ಎಮ್ಮೆದೊಡ್ಡಿಯ ನರಭಕ್ಷಕ,
೮. ಜಾಲಹಳ್ಳಿಯ ಕೊಲೆಗಾರ,
೯. ದೇವರಾಯನ ದುರ್ಗದ ಸಾಧು,
೧೦. ಪೂಜಾರಿ ಬೈರ,
೧೧. ತಗರ್ತಿಯ ಹುಲಿಗಳು.


Nine Man Eaters and one Rogue

K894.4 KENO