Yeru ghattada nadige : janasamudaya mattu nisargada jothege Prof Madhav Gadgil ಏರುಘಟ್ಟದ ನಡಿಗೆ : ಜನಸಮುದಾಯ ಮತ್ತು ನಿಸರ್ಗದ ಜೊತೆಗೆ ಪ್ರೊ ಮಾಧವ ಗಾಡ್ಗೀಳ

Madhav Gadgil ಮಾಧವ ಗಾಡ್ಗೀಳ

Yeru ghattada nadige : janasamudaya mattu nisargada jothege Prof Madhav Gadgil ಏರುಘಟ್ಟದ ನಡಿಗೆ : ಜನಸಮುದಾಯ ಮತ್ತು ನಿಸರ್ಗದ ಜೊತೆಗೆ ಪ್ರೊ ಮಾಧವ ಗಾಡ್ಗೀಳ - Mangaluru Aakrithi Aashaya Publications 2025 - xvii,444p. HB 22.5x15cm.

ಮೊದಲು ಈ ಕೃತಿ ಪ್ರಕಟವಾದದ್ದು ಮಾಧವ ಗಾಡ್ಗೀಳ್ ಅವರ ತಾಯಿ ಭಾಷೆ ಮರಾಠಿಯಲ್ಲಿ. ಆನಂತರ ಅದು ಇಂಗ್ಲಿಷ್, ಹಿಂದಿ ಮತ್ತು ಇತರ ಭಾರತೀಯ ಭಾಷೆಗಳಿಗೆ ಭಾಷಾಂತರಗೊಂಡಿದೆ. ಇದೀಗ ಕನ್ನಡಕ್ಕೆಅನುವಾದ ಮಾಡಿದವರು ಹೆಸರಾಂತ ಹಿರಿಯ ಪತ್ರಕರ್ತ, ಪರಿಸರವಾದಿ ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಮತ್ತು ಅವರ ಸಹೋದರಿ ಶಾರದಾ ಗೋಪಾಲ್. ಮರಾಠಿ ಗಾಡ್ಗೀಳ್ ಅವರ ಹುಟ್ಟು ನೆಲವಾದರೂ ಅವರು ಹೆಚ್ಚು ಓಡಾಡಿದ್ದು ಕನ್ನಡದ ಪರಿಸರದಲ್ಲಿ. ಅದರಲ್ಲೂ ನಾಗೇಶ್ ಹೆಗಡೆ ಹುಟ್ಟಿದ ಉತ್ತರ ಕನ್ನಡದ ಮಣ್ಣಿನಲ್ಲಿ. ಈ ಋಣ ಸಂದಾಯವೋ ಏನೋ ಅನುವಾದ ಮೂಲ ಕನ್ನಡದ್ದೇ ಎನ್ನುವಂತೆ ಮೂಡಿಬಂದಿದೆ.

ಮಾಧವ ಗಾಡ್ಗೀಳ್ ಅವರ ಆತ್ಮಕಥೆ ‘ಏರುಘಟ್ಟದ ನಡಿಗೆ’ಯಲ್ಲಿ ಬೇರೆ ಆತ್ಮಕಥೆಗಳ ಹಾಗೆ ಬರೀ ಮನುಷ್ಯ ಸಂಬಂಧಗಳ ಜೀವನವಾರು ವಿವರಗಳಿಲ್ಲ. ಮನುಷ್ಯ ಮತ್ತು ಪ್ರಕೃತಿ ಸಂಬಂಧದ ಕಾಳಜಿಯಿದೆ. ಇಲ್ಲಿ ಲೇಖಕರು ಕ್ಯಾಲೆಂಡರ್ ಭೂಪಟ ಗಡಿಯಾರ ದಾಟಿ ಬರಿಮಣ್ಣಿನ ಮೇಲೆ ನಡೆದಿದ್ದಾರೆ. ಆ ಕಾರಣಕ್ಕಾಗಿ ಯಾವತ್ತೂ ಈ ಪುಸ್ತಕ ಮನುಷ್ಯ ವಿಭಜಿಸಿಕೊಂಡ ಕೇವಲ ಮನುಷ್ಯ ಮಾತ್ರ ಬದುಕುವ ತುಂಡು ತುಂಡು ಭೂಮಿಯ ಕಥೆಯಲ್ಲ, ಸಕಲ ಜೀವರಾಶಿಯು ಅಖಂಡ ವಿಶ್ವದ ಅಪಾಯದ ಭವಿಷ್ಯವನ್ನು ಊಹಿಸಿ ಎಚ್ಚರಿಸುವ ವಿಶ್ವ ಪರಿಸರದ ಕಥೆ.


9789392116988


AutoBiography
Wild life
A walk up the hill:living with people and nature
biodiversity

591.5K / MADY