Desha vibajaneya papa hottavaru ದೇಶ ವಿಭಜನೆಯ ಪಾಪ ಹೊತ್ತವರು

Rammanohar Lohia ರಾಮಮನೋಹರ ಲೋಹಿಯಾ

Desha vibajaneya papa hottavaru ದೇಶ ವಿಭಜನೆಯ ಪಾಪ ಹೊತ್ತವರು - Bengaluru Aravind India 2024 - 136 p. HB 21x13 cm.

ದೇಶ ವಿಭಜನೆಯನ್ನು ಕುರಿತು ಈಗಾಗಲೇ ಲೆಕ್ಕವಿಲ್ಲದಷ್ಟು ಪುಸ್ತಕಗಳು ಬಂದಿವೆ. ಹಾಗೆ ನೋಡಿದರೆ ಇದೊಂದು ಮುಗಿಯದ ಸರಕು.ಕಾಲದಿಂದ ಕಾಲಕ್ಕೆ ಈ ದುರಂತವು ಬೇರೆ ಬೇರೆ ಮಾಹಿತಿ, ಅಂಕಿ-ಅಂಶ,ಸಂಶೋಧನೆ, ಚರಿತ್ರೆಯ ಅಧ್ಯಯನಗಳೊಂದಿಗೆ ಹೊಸ ಹೊಸ ಕೃತಿಗಳನ್ನು ಸೃಷ್ಟಿಸುತ್ತಿದೆ. ಅಂದಂತೆ,ಭಾರತದಲ್ಲಿ ಸಮಾಜವಾದದ ಯುಗದಲ್ಲಿ ಒಬ್ಬರಾದ ರಾಮ ಮನೋಹರ ಲೋಹಿಯಾ ಅವರು, ಅಖಂಡ ಭಾರತದ ಇಬ್ಭಾಗಕ್ಕೆ ನೇರ ಸಾಕ್ಷಿಯಾಗಿದ್ದವರು. ನೇರ ನಡೆ-ನುಡಿಗಳಿಗೆ ಮತ್ತು ನಿಲುವುಗಳಿಗೆ ಹೆಸರಾಗಿದ್ದ ಅವರು, ಭಾರತದ ಚಿಂತಕರ ವರ್ತುಲ ಮತ್ತು ಸಾರ್ವಜನಿಕ ಬದುಕಿನ ಮೇಲೆ ಬೀರಿರುವ ಪ್ರಭಾವ ಅಗಾಧವಾದುದು.ಅದರಲ್ಲೂ ಲೋಹಿಯಾ ಅವರು ದೇಶ ವಿಭಜನೆಗೆ ಕಾರಣರಾದವರು ಯಾರೆಂದು ಬಗೆದು ನೋಡಿ ಬರೆದಿರುವ The Guilty Men of India's Partition ಅತ್ಯಂತ ಮಹತ್ವದ ಕೃತಿಯಾಗಿದೆ.ಇದನ್ನು ಹೆಸರಾಂತ ಲೇಖಕ ಡಾ.ಟಿ ಎನ್ ವಾಸುದೇವಮೂರ್ತಿ ಅವರು "ದೇಶ ವಿಭಜನೆಯ ಪಾಪ ಹೊತ್ತವರು" ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ. ಇದಕ್ಕಾಗಿ ನಾವು ಅವರಿಗೆ ಆಭಾರಿಗಳಾಗಿದ್ದೇವೆ ದೊಡ್ಡದೊಡ್ಡ ಪದಗಳ ಬಾರವಿಲ್ಲದೆ ಸಹಜವಾದ ತಿಳಿಗನ್ನಡದಲ್ಲಿ ಮೂಡಿಬಂದಿರುವ ಈ ಭಾಷಾಂತರವು ಕನ್ನಡ ವಾಙ್ಮಯಕೊಂದು ಬೆಲೆಯುಳ್ಳ ಸೇರ್ಪಡೆಯಾಗಿದೆ.

ನನ್ನ ತಲೆಮಾರಿನ ಪಾಲಿಗೆ ಗಾಂಧೀಜಿ ಒಂದು ಕನಸಿನ ರೂಪಕವಾಗಿದ್ದರು. ನೆಹರೂ ಒಂದು ಆಸೆಯ ರೂಪಕವಾಗಿದ್ದರು ಮತ್ತು ನೇತಾಜಿ ಕಾರ್ಯಸಿದ್ಧಿಯ ರೂಪಕವಾಗಿದ್ದರು. ಕನಸು ಕೈಮರವಾಯಿತು – ಅದು ದೋಷಪೂರ್ಣ ಕನಸಾದರೂ ಕಾಲಾಂತರದಲ್ಲಿ ವೈಭವಪೂರ್ಣವಾಗಿ ಬೆಳಗಬಲ್ಲ ಕನಸದು. ಆಸೆ ಹುಳಿಯಾಯಿತು ಮತ್ತು ಕಾರ್ಯಸಿದ್ಧಿ ಅಪೂರ್ಣವಾಯಿತು. ಹೀಗೆ ಕನಸು, ಆಸೆ ಮತ್ತು ಕಾರ್ಯಸಿದ್ಧಿಗಳು ತಮ್ಮತಮ್ಮೊಳಗೆ ಸಾಮರಸ್ಯ ಕಾಣಲಿಲ್ಲ. ಅವು ಪ್ರಭಾವಿಸಿದ ವ್ಯಕ್ತಿಗಳ ನಡುವೆಯೂ ಅವು ಸಾಮರಸ್ಯ ತರಲಿಲ್ಲ. ಇದುವೆ ನಮ್ಮ ಕಾಲದ ನೋವಿನ ಮೂಲವಾಗಿದೆ, ಇತಿಹಾಸದ ದುಃಖಮಯವಾದ ಭಾಗವಾಗಿದೆ.
ಪಾಕಿಸ್ತಾನದ ಮೇಲೆ ಹಲ್ಲೆ ಮಾಡಲು ಸಾಧ್ಯವಿಲ್ಲದ ಕಾರಣ ಈ ಹುಚ್ಚರು ಮತ್ತು ಖದೀಮರು ಅವಕಾಶ ಸಿಕ್ಕಾಗಲೆಲ್ಲ ಮುಸ್ಲಿಮರ ಮೇಲೆ ಹಲ್ಲೆ - ಮಾಡಲು ಮುಂದಾಗುತ್ತಾರೆ. ಅಂತಹ ದುಷ್ಕೃತ್ಯಗಳಿಂದ ದೇಶ ಇನ್ನಷ್ಟು ವಿಭಜನೆಯಾಗುತ್ತದೆ. ಹಿಂದೂ ಮುಸ್ಲಿಮರು ಪರಸ್ಪರ ಒಂದಾಗಿ ಗುರುತಿಸಿಕೊಂಡಾಗಲಷ್ಟೇ ವಿಭಜಿತ ದೇಶವನ್ನು ಒಗ್ಗೂಡಿಸಬಹುದು. ಹಿಂದೂ ಮುಸ್ಲಿಂ ಸಂಬಂಧದಲ್ಲಿ ಉಂಟಾದ ವಿಘಟನೆಯೇ ದೇಶ ವಿಭಜನೆಯ ಪ್ರಮುಖ ಕಾರಣವಾಗಿದೆ. ಆದ್ದರಿಂದ ಹಿಂದೂ ಮುಸ್ಲಿಂ ಏಕತೆ ನಮ್ಮ ಸ್ಪಷ್ಟ ಧೈಯವಾಗಬೇಕು ಮತ್ತು ಆ ಗುರಿಯನ್ನು ತಲುಪಲು ದೃಢನಿಶ್ಚಯ ಮಾಡಬೇಕು. ಯಾರ ಪಾಲಿಗೆ ದೇಶ ವಿಭಜನೆ ಶತ್ರುವೋ ಅವರ ಪಾಲಿಗೆ ಮುಸ್ಲಿಮರು ಅನಿವಾರ್ಯವಾಗಿ ಮತ್ತು ಅಗತ್ಯವಾಗಿ ಮಿತ್ರರಾಗಲೇ ಬೇಕು.


9789393555557


Guilty men of Indias Partition

320.954K / LOHD