Jailu Kategalu ಜೈಲು ಕತೆಗಳು

Satyanarayana K ಸತ್ಯನಾರಾಯಣ ಕೆ

Jailu Kategalu ಜೈಲು ಕತೆಗಳು - Bangalore Amulya Pustaka 2023 - 126 p. PB 21x14 cm.

ಈ ಪುಸ್ತಕದಲ್ಲಿ ಒಟ್ಟು ಇಪ್ಪತ್ತ ಮೂರು ಕಥನಗಳಿವೆ. ಪ್ರತಿಯೊಂದೂ ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ನಿರೂಪಣೆಯ ಧಾಟಿಯಲ್ಲಿ ಮತ್ತು ಕಥನದ ಉದ್ದೇಶದಲ್ಲಿ ಕೂಡ ಇವು ವಿಭಿನ್ನವಾಗಿ, ಏಕತಾನತೆಯನ್ನು ಹೊಂದಿಲ್ಲದೇ ಇರುವುದು ವಿಶೇಷ. ಈ ಕಥನಗಳು ಎಲ್ಲಿಯೂ ಬೋರ್ ಹೊಡೆಸದೇ ಸರಾಗವಾಗಿ ಓದಿಸಿಕೊಂಡು ಹೋಗುವುದು ಮಾತ್ರವಲ್ಲ ಕೆಲವೊಂದು ಅತ್ಯಂತ ಕೌತುಕದ ಕಥನಗಳಾಗಿಯೂ ಓದಿಸಿಕೊಂಡು ಹೋಗುತ್ತವೆ. ಆದರೆ ಈ ಎಲ್ಲ ಸಾಹಿತ್ಯಕ ಮೆಚ್ಚುಗೆಯನ್ನೂ ಮೀರಿ, ಕೃತಿಕಾರನನ್ನೂ ಮೀರಿ ನಿಲ್ಲುವ ಗುಣ, ಶಕ್ತಿ ಎರಡೂ ಈ ಕೃತಿಗಿರುವುದು ವಿಶೇಷ. ಅದು ಬಹುಶಃ ಈ ಕೃತಿ ಮೌನವಾಗಿ ಆಗ್ರಹಿಸುವ, ನಮಗೆ ನಾವೇ ಕೇಳಿಕೊಳ್ಳಬೇಕಾದ ಮತ್ತು ನಮಗೆ ನಾವೇ ಕೊಟ್ಟುಕೊಳ್ಳಬೇಕಾದ ಕೆಲವು ಪ್ರಶ್ನೆಗಳಿಗಾಗಿ ಎನಿಸುತ್ತದೆ.

ಈ ಕೃತಿ ನಮ್ಮೆದುರು ತೆರೆದಿಡುವುದು ನಮಗೆ ತಿಳಿದಿಲ್ಲದ, ನಮಗೆ ತಿಳಿದಿರಬೇಕು ಎಂದು ಯಾವತ್ತೂ ಅನಿಸದ, ಆದರೆ ತೀರ ನಮಗೇ ಸಂಬಂಧಿಸಿದ ಮತ್ತು ನಮ್ಮ ಬದುಕಿನ ಯಾವ ಒಂದು ಸಣ್ಣ ತಿರುವೂ ಇದನ್ನು ನಮ್ಮದೇ ಆಗಿಸಿಬಿಡಬಹುದಾಗಿದ್ದ ಜಗತ್ತನ್ನು ಹಾಗಾಗಿಯೇ ಓದುತ್ತ ಓದುತ್ತ ನಮ್ಮೊಳಗೇ ಛಳ್ಳೆನ್ನಿಸುವ ಒಂದು ನಡುಕವನ್ನು ಇದು ಹುಟ್ಟಿಸಿದರೆ ಅಚ್ಚರಿಯೇನಿಲ್ಲ.

ಇವು ಸದಾ ಕಾಲ ಕಾಡುತ್ತಲೇ ಇರುವ ಸತ್ತವರ ನೆರಳಿನಂತೆ, ನಮ್ಮೊಂದಿಗೇ ಇರತಕ್ಕ ಪ್ರಶ್ನೆಗಳು ಎನ್ನುವುದು ನಿಜ. ಆದರೆ ಉತ್ತರ ಇರದಿದ್ದರೂ ಕೂಡ ಇಂಥ ಪ್ರಶ್ನೆಗಳ ಜೊತೆ ಆಗಾಗ ಒಡನಾಡುವುದು, ಇವುಗಳಿಗೆ ಮತ್ತೆ ಮತ್ತೆ ಮುಖಾಮುಖಿಯಾಗುವುದು ಮುಖ್ಯ. ಇದು ಕೆ ಸತ್ಯನಾರಾಯಣರ ಕೃತಿಯ ಬಹುಮುಖ್ಯ ಕಾಣ್ಕೆ. ಇದಕ್ಕಾಗಿ ನಾವೆಲ್ಲರೂ ಅವರಿಗೆ ಋಣಿಯಾಗಿರಬೇಕು.

9788196469160


23 stories
ಇಪ್ಪತ್ತ ಮೂರು ಕಥನಗಳಿವೆ.
A collection of stories on and around prison life

K894.301 / SATJ