Kannada Nadina Bannada Banadigalu ಕನ್ನಡ ನಾಡಿನ ಬಣ್ಣದ ಬಾನಾಡಿಗಳು
Vishwanath Suvarna ವಿಶ್ವನಾಥ ಸುವರ್ಣ
Kannada Nadina Bannada Banadigalu ಕನ್ನಡ ನಾಡಿನ ಬಣ್ಣದ ಬಾನಾಡಿಗಳು - Bengluru Suvarna Publication 2022 - 680 p. HB 24.7x29.5 cm.
ಪಕ್ಷಿ ವೀಕ್ಷಣೆ ಮಾಡುವುದು ಅಥವಾ ಪಕ್ಷಿಗಳನ್ನು ಕ್ಯಾಮೆರಾದೊಳಗೆ ಸೆರೆ ಹಿಡಿಯುವುದು ಅಷ್ಟು ಸುಲಭದ ಮಾತಲ್ಲ. ಈಸಾಹಸಕ್ಕೆ ಅದೆಷ್ಟು ತಾಳ್ಮೆ ಇದ್ದರೂ ಸಾಲದು. ಈ ಮಾತಿಗೆ ನನ್ನದೇ ಅನುಭವವಿದೆ. ಆಗಿನ್ನೂ ಕ್ಯಾಮೆರಾ ಹುಚ್ಚುಆರಂಭವಾಗಿತ್ತು. ನಮ್ಮ ಹಂಚಿನ ಮನೆಯ ಒಂದು ಬದಿಯಲ್ಲಿ ಸೂರಕ್ಕಿಯೊಂದು ಗೂಡುಕಟ್ಟಿ ಮೊಟ್ಟೆ ಇಟ್ಟಿತ್ತು. ಮೊಟ್ಟೆಒಡೆದು ಮರಿಯಾದಾಗ ಅದಕ್ಕೆ ಗುಟುಕು ನೀಡಲು ಬರುತ್ತಿದ್ದ ಸೂರಕ್ಕಿಯನ್ನು ಸೆರೆಹಿಡಿಯಲು ಕ್ಯಾನಾನ್ 1000ಡಿ 55- 250 ಲೆನ್ಸ್ ಹಿಡಿದು ಹಲವು ದಿನ ಒದ್ದಾಡಿದ್ದೆ. ಇಷ್ಟೆಲ್ಲ ಪರಿಶ್ರಮದ ಬಳಿಕ ಸಿಕ್ಕಿದ್ದು ಒಂದೆರಡು ಚಿತ್ರಗಳಷ್ಟೇ. ಇದನ್ನೇಕೆ - ನೆನಪಿಸಿಕೊಂಡೆ ಎಂದರೆ, ಈ ಕೃತಿಯಲ್ಲಿ ಮೇಲ್ನೋಟಕ್ಕೇ ಎರಡು ಸಾವಿರಕ್ಕಿಂತಲೂ ಅಧಿಕ ಛಾಯಾಚಿತ್ರಗಳು ಕಾಣುತ್ತವೆ. 3 ಲೆಕ್ಕ ಹಾಕಿದರೆ ಅದಕ್ಕಿಂತಲೂ ಮಿಗಿಲಿರಬಹುದು. ಸುವರ್ಣ ಅವರ ಪರಿಶ್ರಮ ಹಾಗೂ ತಾಳ್ಮೆಗೆ ಈ ಚಿತ್ರಸಂಪುಟವೇ * ಉದಾಹರಣೆ.
ಬಾನಾಡಿಯ ಒಂದೊಂದು ಟೇಕ್ ಆಫ್‌ಗೆ, ಲ್ಯಾಂಡಿಂಗ್‌ಗೆ, ಮರಿಗೆ ಗುಟುಕು ನೀಡುವ ದೃಶ್ಯಕ್ಕೆ, ಪ್ರಣಯದ ಕೇಳಿಗೆ ಛಾಯಾಗ್ರಾಹಕ ಭಾರವಾದ ಕ್ಯಾಮೆರಾವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಂಡು ಜಪ್ಪಿಸಿ ಕುಳಿತು ಕಾಯಬೇಕು. ಸುವರ್ಣಅವರ ಗಡಿಬಿಡಿಯನ್ನು ಬಲ್ಲವರಿಗೆ ಅವರು ಹೇಗೆ ಧ್ಯಾನಸ್ಥ ಸ್ಥಿತಿಯಲ್ಲಿ ಹೀಗೆ ಕಾಯುತ್ತಾರೆ ಎನ್ನುವುದೇ ಅಚ್ಚರಿ. ಕಾಡಿನಿಂದ, ಕೆರೆಯ ಏರಿಯಿಂದ, ನದಿಯ ದಡದಿಂದ ಅವರು ಹೆಕ್ಕಿ ತಂದ 'ಆ್ಯಕ್ಷನ್' ಚಿತ್ರಗಳು ಅವರ ಪರಿಶ್ರಮದ ಕಥೆಯನ್ನು ತಾವೇಹೇಳುತ್ತವೆ.
ಪಕ್ಷಿ ವೀಕ್ಷಣೆ ಬಗ್ಗೆ ಟಿಪ್ಸ್ ನೀಡುತ್ತಾ ಓದುಗರ ಪ್ರವೇಶಿಕೆ ಬಯಸುವ ಈ ಕೃತಿಯು ರಾಜ್ಯ ಪಕ್ಷಿ 'ನೀಲಕಂಠ'ನಿಂದಆರಂಭವಾಗಿ ಕರುನಾಡ ಬಾನಲ್ಲಿ ಹಾರಾಡುವ 80 ಬಗೆಯ ಪಕ್ಷಿ ಪ್ರಭೇದಗಳ ಬಗ್ಗೆ ಸ್ಕೂಲವಾದ ಪರಿಚಯವನ್ನುಹೊಂದಿದೆ. 80 ಪ್ರಭೇದಗಳಿದ್ದರೂ ಸುಮಾರು 200 ಹಕ್ಕಿಗಳ ಪರಿಚಯ ಈ ಕೃತಿಯಲ್ಲಿದೆ. ಹಕ್ಕಿಗಳ ಪ್ರಣಯ, ಮರಿಗಳಲಾಲನೆ-ಪಾಲನೆ, ಬದುಕನ್ನು ಸೂಕ್ಷ್ಮವಾದ ಕಣ್ಣುಗಳಿಂದ ನೋಡಿದ್ದಾರೆ ಸುವರ್ಣ.
Birds
A Detailed Account of some Bird Species of Karnataka
598K / SUVK