Athmakathanagalalli Shala Shikshana ಆತ್ಮಕಥನಗಳಲ್ಲಿ ಶಾಲಾ ಶಿಕ್ಷಣ

Ashoka Kamath ಅಶೋಕ ಕಾಮತ್

Athmakathanagalalli Shala Shikshana ಆತ್ಮಕಥನಗಳಲ್ಲಿ ಶಾಲಾ ಶಿಕ್ಷಣ - Udupi Bharath Prakashana ಭಾರತ್ ಪ್ರಕಾಶನ 2021 - xii,244 p. PB 21x14 cm.

ಆತ್ಮಕಥನಗಳಲ್ಲಿ ಶಾಲಾ ಶಿಕ್ಷಣ’ ಡಾ.ಅಶೋಕ ಕಾಮತ್ ಸಂಶೋಧನಾತ್ಮಕ ಕೃತಿ. ಈ ಕೃತಿಗೆ ಪ್ರಾಧ್ಯಾಪಕರಾದ ಪ್ರೋ. ಸೋಮಣ್ಣ ಹಾಗೂ ಪ್ರೊ.ಡಿ.ವಿ. ಪರಶಿವಮೂರ್ತಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ವಸಾಹತುಶಾಹಿ ಕಾಲಘಟ್ಟದ ಶಾಲಾ ಶಿಕ್ಷಣದ ಸ್ವರೂಪವನ್ನು ಪ್ರಮುಖವಾಗಿ ವಿದ್ಯಾರ್ಥಿ, ಶಿಕ್ಷಕ, ಪಠ್ಯ, ಮತ್ತು ಪರಿಸರ ಎಂಬ ನೆಲೆಗಳಲ್ಲಿ ವಿವರಿಸಿದ್ದಾರೆ. ಸ್ವಾತಂತ್ರ್ಯಾನಂತರದ ಕಾಲಘಟ್ಟದಲ್ಲಿ ಶಾಲಾ ಶಿಕ್ಷಣದ ನಾಲ್ಕು ಪ್ರಮುಖ ನೆಲೆಗಳಲ್ಲಿ ವಿದ್ಯಾರ್ಥಿ, ಶಿಕ್ಷಕ, ಪಠ್ಯ ಹಾಗೂ ಪರಿಸರ ಮುಂತಾದವುಗಳಿಂದ ಉಂಟಾಗುವ ಪರಿವರ್ತನೆಗಳನ್ನು ಹತ್ತು ಆತ್ಮಕಥೆಗಳನ್ನು ಆಕರವಾಗಿಟ್ಟುಕೊಂಡು ಚರ್ಚಿಸಿದ್ದಾರೆ, ವಿವಿಧ ಜಾತಿ, ವರ್ಗ, ಲಿಂಗ ಪ್ರದೇಶಗಳಲ್ಲಿ ಯಾವ ಬಗೆಯ ಪರಿವರ್ತನೆಗಳು ಕಾಲಕಾಲಕ್ಕೆ ನಡೆದವು ಎನ್ನುವುದನ್ನು ಗುರುತಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ’ ಎಂದು ಪ್ರೊ.ಸೋಮಣ್ಣ ಅಭಿಪ್ರಾಯ ಪಟ್ಟಿದ್ದಾರೆ. ಹಾಗೇ ‘ಸಂಶೋಧಕ ಅಧ್ಯಾಯಗಳ ವಿಂಗಡಣೆ ವೈಜ್ಞಾನಿಕವಾಗಿದ್ದು, ನಿರೂಪಣೆ ಖಚಿತತೆಯಿಂದ ಕೂಡಿದ್ದಾಗಿದೆ. ತಾವು ಹೇಳಬೇಕಾದ ವಿಷಯವನ್ನು ಅತ್ಯಂತ ಸರಳವಾಗಿ ಮಂಡಿಸಿದ್ದಾರೆ. ಆತ್ಮಕಥೆಗಳಲ್ಲಿ ದಾಖಲಾಗಿರುವ ಶಾಲಾ ಶಿಕ್ಷಣದ ಪರಿಚಯ, ಆತ್ಮಕಥನಗಳ ಪಟ್ಟಿ, ಅನುವಾದಿತ ಆತ್ಮಕಥನಗಳ ಪಟ್ಟಿಯನ್ನು ನೀಡಿರುವುದು ಮುಂದಿನ ಸಂಶೋಧಕರಿಗೆ ಅನುಕೂಲವಾಗುತ್ತದೆ’ ಎಂದು ಪ್ರೊ. ಡಿ.ವಿ. ಪರಶಿವಮೂರ್ತಿ ಮೆಚ್ಚುಗೆ ಸೂಚಿಸಿದ್ದಾರೆ.


Education

370K / KAMA