Patrikodyama Pravesha: ಪತ್ರಿಕೋದ್ಯಮ ಪ್ರವೇಶ

Sibanthi Padmanabha K V: ಸಿಬಂತಿ ಪದ್ಮನಾಭ ಕೆ ವಿ

Patrikodyama Pravesha: ಪತ್ರಿಕೋದ್ಯಮ ಪ್ರವೇಶ - Bengaluru Vasanta Prakashana 2021 - xiii,146 p. PB 21x14 cm. - Madhyama Adhyayana Praveshike: ಮಾಧ್ಯಮ ಅಧ್ಯಯನ ಪ್ರವೇಶಿಕೆ-1 .

ಹೊಸ ತಲೆಮಾರಿನ ಪತ್ರಿಕೋದ್ಯಮ ಮೇಷ್ಟ್ರುಗಳ ಪೈಕಿ ಅತ್ಯಂತ ಭರವಸೆ ಹುಟ್ಟಿಸಿರುವ ಬರಹಗಾರ, ಮಾತುಗಾರ, ಅಧ್ಯಾಪಕ – ಸಿಬಂತಿ ಪದ್ಮನಾಭ. ದಕ್ಷಿಣ ಕನ್ನಡ ಮೂಲದ ಸಿಬಂತಿ ತುಮಕೂರು ವಿವಿಯಲ್ಲಿ ಪತ್ರಿಕೋದ್ಯಮ ಆರಂಭವಾದಾಗಿನಿಂದಲೂ ಅದರ ಕರ್ಣಧಾರತ್ವ ವಹಿಸಿದವರು. ಪತ್ರಿಕಾವೃತ್ತಿಯ ಆಳಅಗಲಗಳನ್ನು ಸ್ವತಃ ಅರಿತಿರುವ ಅವರು ಪಾಠಮಾಡುವುದಷ್ಟೇ ಅಲ್ಲ ಸಮಕಾಲೀನ ವಿಚಾರಗಳ ಬಗ್ಗೆ ಆಗಾಗ ಬರೆಯುತ್ತಾರೆ. ಯಾರೂ ಗಮನಿಸದ ವಿಷಯಗಳನ್ನು ಎತ್ತಿ ಹೇಳುತ್ತಾರೆ. ಇಂದಿನ ಹಲವು ಮಾಧ್ಯಮಗಳನ್ನು ಸಕಾರಾತ್ಮಕವಾಗಿ ಬಳಸುತ್ತ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ‘ಪತ್ರಿಕೋದ್ಯಮ ಪ್ರವೇಶ’- ಮಾಧ್ಯಮರಂಗ ಪ್ರವೇಶಿಸಲು ಉತ್ಸುಕರಾಗಿರುವವರಿಗೆ ಮೊದಲ ಪಾಠ. ಹೊಸ ರಾಷ್ಟ್ರೀಯ ಶಿಕ್ಷಣನೀತಿ ಜಾರಿಗೊಂಡಿರುವ ಈ ಸಂದರ್ಭದಲ್ಲಿ ಪತ್ರಿಕೋದ್ಯಮ ಪ್ರವೇಶ ಬಯಸುವವರಿಗೆ ಇಂಥದೊಂದು ಪುಸ್ತಕ ತುರ್ತಾಗಿ ಬೇಕಾಗಿತ್ತು. ಈ ನಿರ್ವಾತವನ್ನು ತುಂಬಿದ್ದಕ್ಕೆ ಸಿಬಂತಿಯವರನ್ನು ಅಭಿನಂದಿಸುತ್ತೇನೆ. ಮುಂದಿನ ದಿನಗಳಿಗೂ ಅಗತ್ಯವಾದ ಪಠ್ಯಗಳನ್ನು ಕನ್ನಡದಲ್ಲಿ ರಚಿಸಿಕೊಡಬೇಕೆಂದು ಒತ್ತಾಯಿಸುತ್ತೇನೆ.

9392935293


Patrikodyamada Itihasa: ಪತ್ರಿಕೋದ್ಯಮದ ಇತಿಹಾಸ
Kannada Patrikodhyama: ಕನ್ನಡ ಪತ್ರಿಕೋದ್ಯಮ
Patrikodyamada Shakhegalu: ಪತ್ರಿಕೋದ್ಯಮದ ಶಾಖೆಗಳು
Vyaktiyagi Patrikodyama: ವ್ಯಕ್ತಿಯಾಗಿ ಪತ್ರಿಕೋದ್ಯಮ

079.54K / PADP