Buddhijivi varsas bhavdhika svatantrya ಬುದ್ಧಿ ಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ

AJAKKALA GIRISHA BHATTA ಅಜಕ್ಕಳ ಗಿರೀಶ ಭಟ್ಟ

Buddhijivi varsas bhavdhika svatantrya ಬುದ್ಧಿ ಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ - Dakshina Kannada 2007 - 193 PB

‘ಬುದ್ಧಿ ಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ’ ಎಸ್. ಎಲ್. ಭೈರಪ್ಪನವರ ‘ಆವರಣ’ ಕೃತಿಯ ವಿಮರ್ಶೆ ಹಾಗೂ ಸಂಕಥನ. ಆವರಣ ಕಾದಂಬರಿ ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಚರ್ಚೆಗಳನ್ನು ಹುಟ್ಟುಹಾಕಿದ್ದು, ಅದರೊಂದಿಗೆ ಕನ್ನಡ ಸಾಹಿತ್ಯ ಲೋಕದ ಒಂದು ವಿಮರ್ಶಾ ಕೃತಿ ಬುದ್ದಿ ಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ

ಈ ಕೃತಿಯನ್ನು ಲೇಖಕ ಅಜಕ್ಕಳ ಗಿರೀಶ ಭಟ್ ರಚಿಸಿದ್ದಾರೆ. ಪರಸ್ಪರ ವಿರುದ್ಧ ವಾದ ತಾತ್ತ್ವಿಕತೆಗಳನ್ನು ಎದುರೆದುರು ಇಟ್ಟು ಚಿಂತನೆ ಮಾಡುವುದು ಎಂದರೆ, ಕ್ಷೌರದಂಗಡಿಯಲ್ಲಿ ಎದುರೆದುರು ಇಟ್ಟಿರುವ ಕನ್ನಡಿಗಳ ನಡುವೆ ನಿಂತು ಎಡಕ್ಕೊಮ್ಮೆ, ಬಲಕ್ಕೊಮ್ಮೆ ನೋಡಿದಂತೆ. ಹೀಗೆ ನೋಡುವುದು ಸಾಹಿತ್ಯದ ಅಭ್ಯಾಸಿಗೆ ಹಿತವಾದ ಶ್ರಮ ಎನಿಸುತ್ತದೆ. ಈ ಶ್ರಮದ ಭಾಗವಾಗಿಯೇ ಸಾಹಿತ್ಯ, ಇತಿಹಾಸ ಮತ್ತು ಸೆಕ್ಯುಲರಿಸಂ ಮೊದಲಾದ ವಿಷಯಗಳ ಕುರಿತು ಇಂದು ಚಾಲ್ತಿಯಲ್ಲಿರುವ ಹಲವು ಒಪ್ಪಿತ ನಿಲುವುಗಳನ್ನು ಈ ಕೃತಿ ಎದುರು ಹಾಕಿಕೊಳ್ಳುತ್ತದೆ.


Kannada Criticism
Avaranada sankathana ಆವರಣ ದ ಸಂಕಥನ
Kannada Fiction

K894.309 AJAB