Tulunadu kannadanudi: Tulu Karnatakada nadu nudi chintane : ತುಳುನಾಡು ಕನ್ನಡನುಡಿ: ತುಳು ಕರ್ನಾಟಕದ ನಾಡು ನುಡಿ ಚಿಂತನೆ

Mohanakrishna Rai K

Tulunadu kannadanudi: Tulu Karnatakada nadu nudi chintane : ತುಳುನಾಡು ಕನ್ನಡನುಡಿ: ತುಳು ಕರ್ನಾಟಕದ ನಾಡು ನುಡಿ ಚಿಂತನೆ - Hampi Kannada Vishvavidyalaya 2012 - 304p.

ಆಡಳಿತಾತ್ಮಕವಾಗಿ ಕರ್ನಾಟಕ ರಾಜ್ಯದೊಳಗೆ ಗುರುತಿಸಿಕೊಂಡಿರುವ ತುಳುನಾಡು ಭೌಗೋಳಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಹಾಗೂ ಸ್ವಂತಿಕೆಯನ್ನು ಉಳಿಸಿಕೊಂಡು ಬಂದಿರುವ ಪ್ರದೇಶ.
ತುಳು ಆಡಳಿತ ಭಾಷೆಯ ಮಟ್ಟಕ್ಕೆ ಏರದಿದ್ದರೂ, ಆಡುಭಾಷೆಯಾಗಿ ತುಳುನಾಡಿನ ಜನರ ಬದುಕನ್ನು ಬೆಸೆದುಕೊಂಡಿದೆ. ಬಹುಭಾಷಿಕ ಸಂಸ್ಕೃತಿಯನ್ನು ಹೊಂದಿರುವ ತುಳುನಾಡು ಸಾಮರಸ್ಯದ ಬದುಕನ್ನು ನಡೆಸಿಕೊಂಡು ಬಂದಿದೆ. ಕೋಮುವಾದವೆಂಬ ಸಾಮಾಜಿಕ ಪಿಡುಗು ತುಳುನಾಡಿನ ಬದುಕನ್ನು ಸ್ವಲ್ಪಮಟ್ಟಿಗೆ ಡಿಸ್ಟರ್ಬ್ ಮಾಡಿದೆಯಾದರೂ, ತುಳುನಾಡಿನ ಜನತೆ ಅದರಿಂದ ಕಂಗೆಡಲಿಲ್ಲ. ಚರಿತ್ರೆ ಯುದ್ದಕ್ಕೂ ಕರ್ನಾಟಕದ ಸಾರ್ವಭೌಮತ್ವವನ್ನು ಒಪ್ಪಿಕೊಂಡು ಸಾಮಂತ ನೆಲೆಯಲ್ಲಿ ಅಸ್ತಿತ್ವವನ್ನು ಕಂಡುಕೊಂಡಿರುವ ತುಳುನಾಡಿನ ಅನುಭವಗಳು ಅತ್ಯಂತ ಸಂಕೀರ್ಣ ಸ್ವರೂಪದವು. ಸಾರ್ವಭೌಮ ಹಾಗೂ ಸಾಮಂತ ಸಂಬಂಧಗಳು, ಭಾಷಿಕ ಯಜಮಾನಿಕೆ, ತುಳು ಐಡೆಂಟಿಟಿ ಮುಂತಾದ ಮಹತ್ವದ ವಿಚಾರಗಳನ್ನು ಖಚಿತವಾದ ಸೈದ್ಧಾಂತಿಕತೆಯೊಂದಿಗೆ ಪ್ರಸ್ತುತ ಕೃತಿಯಲ್ಲಿ ಚರ್ಚಿಸಲಾಗಿದೆ. ತುಳುನಾಡು ಕರ್ನಾಟಕದೊಂದಿಗೆ ಹಾಗೂ ತುಳು ಕನ್ನಡದೊಂದಿಗೆ ಹೊಂದಿರುವ ಆಡಳಿತಾತ್ಮಕ ಹಾಗೂ ಭಾಷಿಕ ಸಂಬಂಧಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನದಲ್ಲಿ ಈ ಕೃತಿಯು ಯಶಸ್ವಿಯಾಗಿದೆ. ತುಳುನಾಡನ್ನು ಪ್ರಾದೇಶಿಕವಾಗಿ ವ್ಯಾಖ್ಯಾನಿಸುತ್ತಾ, ಕರ್ನಾಟಕದೊಂದಿಗೆ ಮುಖಾಮುಖಿಯನ್ನಾಗಿಸುವುದು ಈ ಕೃತಿಯ ಉದ್ದೇಶ.



9789381645543


South Kanara /South Canara

954.871K MOHT