Bharatada svathanthrya horata: arvattu aghraganya nayakaru ಭಾರತದ ಸ್ವಾತಂತ್ರ್ಯ ಹೋರಾಟ: ಅರವತ್ತು ಅಗ್ರಗಣ್ಯ ನಾಯಕರು

KRASHNAMURTI (G M) ಕೃಷ್ಣಮೂರ್ತಿ (ಜಿ ಎ೦)

Bharatada svathanthrya horata: arvattu aghraganya nayakaru ಭಾರತದ ಸ್ವಾತಂತ್ರ್ಯ ಹೋರಾಟ: ಅರವತ್ತು ಅಗ್ರಗಣ್ಯ ನಾಯಕರು - Bengaluru Vasanta Prakashana 2015 - 213

ಜಿ.ಎಂ.ಕೃಷ್ಣಮೂರ್ತಿ ಅವರ ಕೃತಿ ಭಾರತದ ಸ್ವಾತಂತ್ರ್ಯ ಹೋರಾಟ 60 ಅಗ್ರಗಣ್ಯ ನಾಯಕರು . ಪರಕೀಯರ ಬಿಗಿ ಮುಷ್ಟಿಯ ಹಿಡಿತಕ್ಕೆ ಸಿಲುಕಿ ನಲುಗಿದ್ದ ನಮ್ಮ ದೇಶ 1947ರ ಆಗಸ್ಟ್ 15 ರಂದು ಸರ್ವ ಸ್ವತಂತ್ರವಾದಾಗ ದೇಶದ ಇಡೀ ಜನತೆ ಸಂಭ್ರಮೋಲ್ಲಾಸಗಳಿಂದ ನಲಿಯಿತು. ಈ ಸ್ವಾತಂತ್ರ್ಯ ಗಳಿಕೆಯ ಹಿಂದೆ ಅಗಣಿತ ಮಂದಿಯ ಅಪಾರ ಪರಿಶ್ರಮದ, ಅಸಾಮಾನ್ಯ ಧೈರ್ಯದ, ಆಳ ದೇಶನಿಷ್ಠೆಯ ಹೋರಾಟವಿದೆ, ಅನೇಕರ ಬಲಿದಾನವಿದೆ. ಈ ಚರಿತ್ರಾರ್ಹ ಹೋರಾಟಕ್ಕೆ ಪ್ರೇರಣೆಯಾಗಿ, ಅದರಲ್ಲಿ ತಾವೂ ಭಾಗಿಯಾಗಿ ದೇಶದ ಕಣ್ಮಣಿಗಳೆನಿಸಿದ ಅನೇಕ ನಾಯಕರ ಯಾದಿಯೇ ನಮ್ಮ ಕಣ್ಣ ಮುಂದಿದೆ. ಹಿರಿಯ ಲೇಖಕ ಜಿ.ಎಂ. ಕೃಷ್ಣಮೂರ್ತಿಯವರು ಅಪಾರ ಶ್ರಮವಹಿಸಿ ರೂಪಿಸಿಕೊಟ್ಟಿರುವ ಈ ಕೃತಿಯು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ೬೦ ಪ್ರಮುಖ ನಾಯಕರ ಚಿತ್ರಣವನ್ನು ಮನದುಂಬುವಂತೆ ಚಿತ್ರಿಸುತ್ತದೆ. ಮಹಾತ್ಮ ಗಾಂಧಿ, ರಾಜೇಂದ್ರ ಪ್ರಸಾದ್, ವಿನೋಬಾ ಭಾವೆ, ವಲ್ಲಭಬಾಯಿ ಪಟೇಲ್, ಜವಾಹರಲಾಲ್ ನೆಹರೂ, ಲಾಲಾ ಲಜಪತ್ರಾಯ್, ಭಗತ್ ಸಿಂಗ್, ಸುಭಾಷ್ಚಂದ್ರ ಬೋಸ್, ರಾಮಮನೋಹರ ಲೋಹಿಯಾ ಮೊದಲಾದವರ ದೇಶಭಕ್ತಿ, ಕಾರ್ಯ ನಿಷ್ಠೆ, ಸಂಘಟನಾ ಚಾತುರ್ಯಗಳನ್ನು ಅರಿಯುವುದೇ ಒಂದು ಚೇತೋಹಾರಿ ಅನುಭವ. ಸರಳ ಶೈಲಿಯ ಈ ಕೃತಿ ಓದುಗರ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ಮನ ಒಪ್ಪುವಂತಿದೆ

923.2K KRAB