Jagava nadugisida a hattudina ಜಗವ ನಡುಗಿಸಿದ ಆ ಹತ್ತು ದಿನ

REED (John) ರೀಡ್ (ಜಾನ್)

Jagava nadugisida a hattudina ಜಗವ ನಡುಗಿಸಿದ ಆ ಹತ್ತು ದಿನ - Bangalore Navakaranataka Prakashana 2017 - 232

ರಷ್ಯದಲ್ಲಿ ನಡೆದ ಅಕ್ಟೋಬರ್ ಮಹಾಕ್ರಾಂತಿಗೆ ನೂರು ವರುಷ ಸಂದಿದೆ. ಝಾರ್ ಚಕ್ರವರ್ತಿಯ ದುರಾಡಳಿತದ ವಿರುದ್ಧ ನಡೆದ ಬೋಲ್ಶೆವಿಕರ ವಿಜಯದ ವಸ್ತುವೇ "ಜಗವ ನಡುಗಿಸಿದ ಹತ್ತು ದಿನ" ಕೃತಿಯ ಹೂರಣ. ಇದನ್ನು ಬರೆದವನು ಅಮೆರಿಕನ್ ಸಂಜಾತ ಜಾನ್ ರೀಡ್ ಎಂಬ ಅಮೆರಿಕನ್ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯ, ಪತ್ರಕರ್ತ ಹಾಗೂ ಬರಹಗಾರ. ಈ ಮಹಾಕ್ರಾಂತಿಯನ್ನು ಈತ ಪ್ರತ್ಯಕ್ಷವಾಗಿ ಕಂಡು ಯಥಾವತ್ತಾಗಿ ಬರಹರೂಪಕ್ಕಿಳಿಸಿದ್ದಾನೆ. ಹೋರಾಟಗಾರರೊಡನಿದ್ದು ಗನ್ ಹಿಡಿಯದೆ ಪತ್ರಕರ್ತನಾಗಿ ಪೆನ್ ಹಿಡಿದು ಸ್ಥಳದಿಂದ ಸ್ಥಳಕ್ಕೆ ಅಲೆದಾಡುತ್ತಾ, ವದಂತಿಗಳಿಗೆ ಕಿವಿಗೊಟ್ಟರೂ ಅದರಲ್ಲಿನ ಸತ್ಯಗಳನ್ನು ಸೋಸುತ್ತಾ ಬಹು ಜಾಗರೂಕತೆಯಿಂದ ಕಾರ್ಮಿಕರ ವಿಜಯವನ್ನು ಹೆಮ್ಮೆಯಿಂದ ಅನುಭವಿಸುತ್ತಾ ಬರೆದ ಪ್ರತ್ಯಕ್ಷ ವರದಿಯಿದೆಂದರೂ ಸರಿಯೇ. ಶೋಷಣೆ, ದಬ್ಬಾಳಿಕೆ, ಕ್ರೌರ್ಯದ ಪ್ರತಿನಿಧಿಗಳಾದ ಬಂಡವಾಳಗಾರರು ಜಗತ್ತಿನ ಕಾರ್ಮಿಕ ಹೋರಾಟಗಾರರ ಮುಂದೆ ಸೋತು ಸುಣ್ಣವಾದ ಐತಿಹಾಸಿಕ ದಿನದ ವಿಜಯವನ್ನು ವರ್ಣಿಸುವ ಮಹೋನ್ನತ ಕೃತಿ "ಜಗವ ನಡುಗಿಸಿದ ಹತ್ತುದಿನ". ಡಾ. ಬಿ. ಆರ್. ಮಂಜುನಾಥ್ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

9788184677249


Ten days that shook the world
Russia
USSR
The Soviet Union

947.0841K REEJ