Peetadhipatiya Pathni ಪೀಠಾಧಿಪತಿಯ ಪತ್ನಿ

DURRANI (Tehamina) ತೆಹಮಿನಾ ದುರ್ರಾನಿ

Peetadhipatiya Pathni ಪೀಠಾಧಿಪತಿಯ ಪತ್ನಿ - Bengaluru Srashti Pablikeshans. 2014 - xi,357

ತೆಹಮಿನಾ ದುರ್ರಾನಿ ಎಂಬ ಲೇಖಕಿ ಬರೆದ ಪುಸ್ತಕವನ್ನು “ಪೀಠಾಧಿಪತಿಯ ಪತ್ನಿ” ಎಂಬ ಹೆಸರಿನಲ್ಲಿ ರಾಹುರವರು ಕನ್ನಡಿಗರಿಸಿದ್ದಾರೆ. ಈ ಪುಸ್ತಕ ಒಂದು ಧರ್ಮದ ಹೆಸರಿನಲ್ಲಿ ಜನರನ್ನು ಹೇಗೆಲ್ಲ ಶೊಷಿಸುವರು, ತನ್ನ ದೃಷ್ಕೃತ್ಯಗಳಿಗೆಲ್ಲಾ ಹೇಗೆ ಧರ್ಮದ ಬಣ್ಣ ಬಳಿಯುವರು ಮತ್ತು ಅದನ್ನೆಲ್ಲಾ ಹೇಗೆ ನ್ಯಾಯೀಗರಿಸುವರು ಎಂಬುದನ್ನು ಬಿಚ್ಚಿಡುತ್ತಾ ಹೋಗುತ್ತದೆ.
ಪ್ರಧಾನವಾಗಿ ಇಂತಹ ಒಂದು ಚಕ್ರವ್ಯೂಹದಲ್ಲಿ ಸಿಲುಕಿದ ಹಲವಾರು ಹೆಣ್ಣುಮಕ್ಕಳ ಕರುಣಾಜನಕ ಕಥೆಗಳನ್ನು ಹೇಳಿ ಕೊಡುತ್ತದೆ. ಈ ಕೃತಿಯ ಉದ್ದಕ್ಕೂ ಒಂದು ಸಂತನನ್ನು ಕೇಂದ್ರೀಕರಿಸಿ ನಡೆಯುವಂತ ಹಲವಾರು ಕಂದಾಚಾರಗಳು ಅವ್ಯಾವುದಕ್ಕು ಇಸ್ಲಾಮಿನ ಬೆಂಬಲವಿಲ್ಲ. ಅವನ ಪೂರ್ವಜನರ್ಯಾರೊ ಸಂತರಾಗಿದ್ದರು ಎಂದು ಅವರ ಮಕ್ಕಳೆಲ್ಲ ವಾರಸುದಾರರಂತೆ ಸಂತರಾಗಲಾರರು, ತಮ್ಮ ಪೂರ್ವಜ ಸಂತನೆಂಬುವುದನ್ನು ಬಂಡವಾಳವಾಗಿಸಿಕೊಂಡು ಸಂತನ ದರ್ಗಾವನ್ನು (ಪುಣ್ಯಕ್ಷೇತ್ರ) ಕೇಂದ್ರೀಕರಿಸಿಕೊಂಡು, ಸುತ್ತಮುತ್ತಲ ಜನರ ವಿಶ್ವಾಸವನ್ನೇ ನ್ಯೂನತೆಯನ್ನಾಗಿಸಿಕೊಂಡು, ವಾರಸುದಾರ ನಡೆಸುವಂತಹ ಕೃತ್ಯಗಳು ಅತಿ ಭಯಾನಕವಾದದ್ದು.

ಪುಸ್ತಕ ಓದುತ್ತಲೂ ಹೀರ ಎಂಬ ಬಡ ಹುಡುಗಿಯ ಕಥೆಯನ್ನು ಓದುವಿರಿ, ನಂತರ ಇಂತಹದೊಂದು ಡೋಂಗಿ ಬಾಬಾನನ್ನು ಪರಿಚಯಿಸಿಕೊಳ್ಳುವಿರಿ, ನಂತರ ಅವನ ಕೃತ್ಯಗಳ ವಿಕೃತ ಸರಣಿಯನ್ನೇ ನಿಮ್ಮ ಮುಂದೆ ಬಿಚ್ಚಿಡುತ್ತಾ ಸಾಗುತ್ತದೆ ಪುಸ್ತಕ. ಹಲವಾರು ವಿರೋಧಾಭಾಸಗಳೂಂದಿಗೆ, ಹಲವಾರು ಅನಿಸ್ಲಾಮಿಕವಾದ ಪದ್ಧತಿಗಳು, ತಮ್ಮ ಸ್ವಂತಸ್ಥಿತಿಗೆ ತಮಗೆ ತಾವೇ ಇಸ್ಲಾಮಿನ ಹೆಸರಿನಲ್ಲಿ ಹುಟ್ಟಿಸಿಕೊಂಡ ಹಲವಾರು ನಿಯಮಗಳೊಂದಿಗೆ.

ಇಲ್ಲಿ ಪೀಠಾಧಿಪತಿ ಎಂದು ಕರೆಸಿಕೊಳ್ಳುವ ಡೋಂಗಿ ಬಾಬಾ, ಮತ್ತು ಅದರ ಹೆಸರಿನಲ್ಲಿ ಮುಸ್ಲಿಮರನ್ನು ಕಿತ್ತು ತಿನ್ನುವಂತಹ ರಣಹದ್ದುಗಳ ಬಗ್ಗೆ ನನಗೆ ತಿಳಿದಿತ್ತು, ಅದೆಲ್ಲವನ್ನು ನಿವಾರಿಸಿ ಯಾವುದು ಇಸ್ಲಾಮಿಕವಾದದ್ದು? ಯಾವುದು ಅನಾಚಾರ ?ಎಂಬುವ ವೈಚಾರಿಕತೆ ಬಿತ್ತಲು ಪರಿಶ್ರಮ ಸುತ್ತಿದ್ದೆ. ಆದರೆ ಈ ಪುಸ್ತಕದ ಅರ್ಧಭಾಗ ಕಳೆಯುತ್ತಲೂ ನನಗೆ ಊಹಿಸಲೂ ಸಾಧ್ಯವಿಲ್ಲದಂತಹ ಹಲವಾರು ಕತ್ತಲ ಜಗತ್ತು ಕಂಡೆ.

ಕುರಾನಿನಲ್ಲಿ ಗಂಡ-ಹೆಂಡತಿಯರ ಬಗ್ಗೆ ಹೇಳಿದ್ದು” ನಿಮ್ಮ ಹೆಂಡತಿಯರು ನಿಮಗೆ ವಸ್ತ್ರಗಳಿದ್ದಂತೆ, ನೀವು ಕೂಡ ಹೆಂಡತಿಯರಿಗೂ ವಸ್ತ್ರಗಳಿದ್ದಂತೆ”ಹೇಗೆ ನಾವು ವಸ್ತ್ರಗಳನ್ನು ಆತುಕೊಂಡಿರುವೆವೂ ಅದೇ ರೀತಿ ಎಂದಿತ್ತು ಆದರೆ ಈ ಪುಸ್ತಕದಲ್ಲಿ ಬರುವ ಪೀಠಾಧಿಪತಿ, ಇಸ್ಲಾಮಿನ ಹೆಸರಿನಲ್ಲಿ ಸಂತ ನಾಗಿದ್ದವನು, ತನ್ನ ಹೆಂಡತಿಯನ್ನು ಮದುವೆಯಾದ ಮೊದಲ ವಾರವೇ ಹೆಂಡತಿ, ತನ್ನ ಮನೆಯಲ್ಲಿಯೇ ಇದ್ದ ಅನ್ಯ ಪುರುಷನ ಮುಂದೆ ಪರದಾ ಹಾಕಲಿಲ್ಲ ಎಂದು ಎಲ್ಲರ ಮುಂದೆ ಮನಬಂದಂತೆ ಬಡಿದುಹಾಕಿವನು, ನಂತರದ ದಿನಗಳಲ್ಲಿ ವೇಶ್ಯಾವಾಟಿಕೆಗೆ ಅಡ್ಡಿ ಪರಪುರುಷ ತನ್ನ ಹೆಂಡತಿಯನ್ನು ಬೋಗೀಸುತ್ತಿದ್ದರೆ ಅಲ್ಲೇ ಕುಳಿತು ಸಿನಿಮಾ ನೋಡಿದವನು. ಅಷ್ಟಕ್ಕೂ ಅಂದು ಅವಳ ಹೆಂಡತಿ ಪರದಾ ಹಾಕದಿದ್ದದ್ದು ಆರು ವರ್ಷದ ಸಣ್ಣ ಮಗುವಿನ ಮುಂದೆ. ಇಸ್ಲಾಮಿಕವಾಗಿ ಆರು ವರ್ಷದ ಹುಡುಗನ ಮುಂದೆ ಪರದೇ ಹಾಕದಿದ್ದರೆ ತೊಂದರೆ ಏನೂ ಇಲ್ಲ . ತನ್ನ ಹೆಂಡತಿಯನ್ನು ಶಿಕ್ಷಿಸಿ ಮುಂದೆ ವೇಶ್ಯಾವಾಟಿಕೆಗೆ ಅಡ್ಡಿ, ತನ್ನ ಹೆಂಡತಿ ಬೆತ್ತಲಾಗಿ ಕುಣಿಯುವಂತೆ ಪ್ರೇರೇಪಿಸಿದ ನೀಚನಿಗೆ ಆಗ ಮಾತ್ರ ಯಾಕೋ ಆರು ವರ್ಷದ ಹುಡುಗ ತನ್ನ ಹೆಂಡತಿಗೆ ಪರಪುರುಷನಾಗಿಬಿಟ್ಟ. ಅವನ ಕರ್ಮಠತೆ ಅವರನ್ನು ಕೆರಳಿಸಿ ಬಿಟ್ಟಿತು ಪಾಪ.

ಊರಿಗೆಲ್ಲ ಧರ್ಮ ಬೋಧಿಸುವವನು ತನ್ನ ಕಾಮ ತೀಟೆ ತೀರಿಸಲು ಸ್ವಂತ ಮಗಳನ್ನು ಬಳಸಲು ಹಿಂದೂ ಮುಂದೂ ನೋಡಲಿಲ್ಲ ಅದು ಕೂಡ ಹತ್ತು ವರ್ಷದ ಮಗಳನ್ನು. ತನ್ನ ಕಾಮಾಂದ ಕಣ್ಣುಗಳಿಗೆ ಅರಸಿಬಂದ ನಿರಾಶ್ರಿತರಲ್ಲಿ ಸುಂದರವಾಗಿ ಕಂಡವರನ್ನೆಲ್ಲ ಬಳಸಿಕೊಂಡ. ಅವರಲ್ಲಿ ವಿಧವೆಯವರಿದ್ದರು, ಅನಾಥ ಮಕ್ಕಳಿದ್ದರು, ಅದು ಕೂಡ ಜಗತ್ತು ತಿಳಿಯದ ಸಣ್ಣ ಮಕ್ಕಳು. ಕೊನೆಗೆ ಹಾಗೆ ದಮನಿತಳಾದ ಒಬ್ಬಳಿಂದಲೇ ಕೊಲೆಯಾಗಿಬಿಟ್ಟ.
ಈ ಕತೆಯಲ್ಲಿ ಹಲವಾರು ಜನರಿಂದ ಅತ್ಯಾಚಾರಕ್ಕೊಳಗಾದ ಎರಡು ಮಕ್ಕಳ ತಾಯಿಯ ವ್ಯಥೆ ಬಲು ವೇದನಾಜನಕ ಕಥೆ. ಅವಳನ್ನು ಅನುಭವಿಸದ ಜನ ಅವಳಿದ್ದ ಕಡೆಗಳಲ್ಲಿ ಕಡಿಮೆ. ಗುಲಾಮರಂತೆ ತನ್ನ 12ವರ್ಷದ ಪ್ರಾಯದಿಂದಲೇ ಯಜಮಾನನಿಂದಲೂ ಅವನಿಗೆ ಹಣ ನೀಡಿದ ಹಲವರಿಂದಲೂ ಅತ್ಯಾಚಾರಕ್ಕೊಳಗಾದಳು ಅದು ಕೂಡ ಒಂದಿಬ್ಬರು ಯಜಮಾನರಲ್ಲ ಮತ್ತು ಆ ಯಜಮಾನರಿಗೆ ಒಂದಿಬ್ಬರು ಗಿರಾಕಿಗಳೂ ಅಲ್ಲ ಅದು ಸಾವಿರದ ಸಂಖ್ಯೆ ಮೀರಿದ್ದು.

ಲೇಖಕರು ಸ್ತ್ರೀವಾದಿಯಾದ್ದರಿಂದಲೇ ಕೆಲವೊಂದನ್ನು ವೈಭವೀಕರಿಸಿ ರಬಹುದು ಆದರೆ ಈ ಪುಸ್ತಕ ಯಾರು ಓದುತ್ತಾರೋ ಬಿಡುತ್ತಾರೋ ಮುಸ್ಲಿಮರಂತೂ ಇದನ್ನು ಓದಲೇಬೇಕು. ಇಂತಹ ಡೋಂಗಿ ಬಾಬಾಗಗಳಿಂದ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳಿಗೆ ತೆರೆಎಳೆಯಲು ಇದೊಂದು ಅದ್ಭುತ ಕೃತಿಯಾಗಬಹುದು ಮತ್ತು ಇಂತಹವರ ಕೈಯಲ್ಲಿ ಸಿಲುಕಿ ನಲುಗುವಂತಹ ಹಲವಾರು ಹೆಣ್ಣುಮಕ್ಕಳಿಗೆ ವಿಮೋಚನೆಯಾಗಬಹುದು.


9789381244302


Tr
Rahu
Peetadhipatiya
patni
by

K894.3 DURP