Baduku bandikhane.

NILA (K). ನೀಲಾ (ಕೆ)

Baduku bandikhane. ಬದುಕು ಬಂದೀಖಾನೆ - Udupi. Akhila Bharata Janavadi Mahila Sanghatane., 2001 - 64

ಹೊರಾಟಗಾರ್ತಿ ಕೆ. ನೀಲಾ ಅವರು ರೈತ ಪರ ಚಳುವಳಿಗಾಗಿ ಸೆರೆವಾಸ ಅನುಭವಿಸಬೇಕಾಯಿತು. ಜೈಲಿನಲ್ಲಿ ಕಳೆದ ಹತ್ತು ದಿನಗಳ ಅನುಭವವನ್ನು ನೀಲಾ ಅವರು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಇದೊಂದು ಅನುಭವ ಕಥನ.

ಈ ಅನುಭವ ಕಥನಕ್ಕೆ ಬೆನ್ನುಡಿ ಬರೆದಿರುವ ಹಿರಿಯ ಪತ್ರಕರ್ತ ಜಿ.ಎನ್. ಮೋಹನ್ ಅವರು ’ನೀಲಾ ಹೋರಾಟಗಳ ಸಂಗಾತಿ. ಒಂದು ಚಳವಳಿಯ ಬೆನ್ನಿಗಿರುವ ಹಲವು ಆಯಾಮಗಳನ್ನು ಸರಳವಾಗಿ ಬಿಡಿಸಿ ಹೇಳಬಲ್ಲರು. ರೈತರು ರಸ್ತೆ ತಡೆಗೆ ಇಳಿದಿದ್ದಕ್ಕೂ ಅಮೇರಿಕಾದ ದೊಡ್ಡಣ್ಣ ಕೈಯಲ್ಲಿ ಛಾಟಿ ಹಿಡಿದಿದ್ದಕ್ಕೂ ಇರುವ ಸಂಕೀರ್ಣ ಸ೦ಬ೦ಧ ಬಿಡಿಸಿಡಲು ನೀಲಾರಂತಹವರಿಗೆ ಮಾತ್ರ ಸಾಧ್ಯ.

ಈ ಪುಸ್ತಕ ನೀಲಾರವರ ಮಾತ್ರವಲ್ಲ. ಪ್ರತೀ ಹೋರಾಟಗಾರರ ಆತ್ಮ ಚರಿತ್ರೆಯ ಆಯ್ದ ಭಾಗ. ನೀಲಾ ಹಾಗೂ ಅವರ ಸಂಗಾತಿಗಳು ಒಂದು ವ್ಯವಸ್ಥೆಯನ್ನು ಬದಲು ಮಾಡಲು ಹೊರಟವರು. ತೊಗರಿಯಿಂದ ಹಿಡಿದು ವರದಕ್ಷಿಣೆಯ ಸಾವಿನವರೆಗೆ ಇರುವ ಕಾಣುವ, ಕಾಣಲಾರದ ಸಂಬಂಧಗಳು ಇಲ್ಲಿ ಬಿಚ್ಚಿಕೊಳ್ಳುತ್ತವೆ. ನೀಲಾ ಜೈಲಿನಿಂದ ಜನರೆಡೆಗೆ, ಜನರೆಡೆಯಿಂದ ಜೈಲಿಗೆ ಯಾತ್ರ, ನಡೆಸುತ್ತಿದ್ದಾರೆ. ಒಂದು ಲಾಲ್ ಸಲಾಂ' ಒಂದು 'ಇಂಕ್ವಿಲಾಬ್ ಜಿಂದಾಬಾದ್' ಇಂತಹ ಯಾತ್ರೆಯನ್ನು ನಿರಂತರವಾಗಿಸಿದೆ. ನೀಲಾ ಮಾತ್ರವಲ್ಲ, ಚಂದಮ್ಮ, ಮರುಳಮ್ಮ, ಸಂಗಮ್ಮ, ಅಮೀನಾ, ಜಾಹೀದ, ಹುಸೇನಬ, ಸೀತಾಬಾಯಿ, ಪದ್ವಿನಿ, ಅಜ್ಜಿ... ಎಲ್ಲರೂ ಈ ಯಾತ್ರೆಯಲ್ಲಿದ್ದಾರೆ’ ಎಂದು ಪುಸ್ತಕದ ಬಗ್ಗೆ ಬರೆದಿದ್ದಾರೆ.
ನೀಲಾ ಅವರ ಜೈಲಿನ ಅನುಭವ ಕಥನ ಹೈದರಾಬಾದ್ ಕರ್ನಾಟಕದ ರೈತರ-ಸಾಮಾನ್ಯರ ಜನಜೀವನ ಕಟ್ಟಿಕೊಡುತ್ತದೆ. ಅಕ್ಷರಲೋಕಕ್ಕೆ ಹೈದರಾಬಾದ್ ಕರ್ನಾಟಕದ ಬದುಕನ್ನು ವಿಭಿನ್ನ ರೀತಿಯಲ್ಲಿ ತೆರೆದಿಡುವ ಕೃತಿಯಿದು.


Women Woman

305.4K NILB