Papada huvu Fhulan ಪಾಪದ ಹೂವು ಫೊಲನ್

RAVI BELAGERE ರವಿ ಬೆಳಗೆರೆ

Papada huvu Fhulan ಪಾಪದ ಹೂವು ಫೊಲನ್ - Bengaluru Bhavana Prakashana 2001 - vi,186

ಕಡೆಗೊಂದು ದಿನ ಆ ಮುಹೂರ್ತ ಬಂದೇ ಬಿಟ್ಟಿತು. 1994ರಲ್ಲಿ, ಹದಿಮೂರು ವರ್ಷಗಳ ಜೈಲುವಾಸದ ನಂತರ ಫೂಲನ್ ದೇವಿಯನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು. ಗ್ವಾಲಿಯರ್ ಜೈಲಿನ ಹೆಬ್ಬಾಗಿಲಲ್ಲಿ ಅವನು ನಿಂತಿದ್ದ: ಉಮೇದ್ ಸಿಂಗ್. ಫೂಲನ್‌ಳ ಮುಖ ನೋಡಿದವನೇ ಹತ್ತಿರಕ್ಕೆ ಓಡಿಬಂದ. “ಕಡೆಗೂ ಬಿಡಿಸಿಯೇ ಬಿಟ್ಟೆಯಲ್ಲೋ ದನಕ್ಕೆ ಹುಟ್ಟಿದೋನೇ?'' ಅಂದು ಪ್ರೀತಿಯಿಂದ ನಕ್ಕಳು ಫೂಲನ್. ಉಮೇದ್ ಸಿಂಗ್ '!' ಅಂತ ಮಾತ್ರ ಅಂದು ಸುಮ್ಮನಾದ. ಅವತ್ತಿನ ತನಕ ಉಮೇದ್ ಸಿಂಗ್‌ನೊಂದಿಗೆ ಮುಚ್ಚಿಟ್ಟ ವಿಷಯವೊಂದನ್ನು ಫೂಲನ್ ಮೊಟ್ಟಮೊದಲ ಬಾರಿಗೆ ಜೈಲಿನಿಂದ ಹೊರಟಿದ್ದ ಘಳಿಗೆಯಲ್ಲಿ ಬಯಲು ಮಾಡಿದ್ದಳು.
ರವಿ ಬೆಳಗೆರೆ

923.41K RAVP