Niru. ನೀರು

NARAHARI (E D) ನರಹರಿ (ಇ ಡಿ)

Niru. ನೀರು - Kasaragodu Kala Kutira Prakashana 1999 - vi,67


ನೀರು ನಮಗೆಲ್ಲರಿಗೂ ಬೇಕಾದ ಅತ್ಯಗತ್ಯ ವಸ್ತು. ಭೂಮಿಯಲ್ಲಿನ ಎಲ್ಲ ಜೀವಿಗಳೂ ತಮ್ಮ ಬದುಕನ್ನು ಸಾಗಿಸಲು ನೀರು ಬೇಕೇ ಬೇಕು. ಭೂಮಿಯಲ್ಲಿ ನೀರು ಇಲ್ಲದಿದ್ದರೆ ಯಾವ ಜೀವಿಯೂ ಮನುಷ್ಯನೂ ಸಹ ಇಲ್ಲಿ ಬದುಕಿ ಬಾಳಲು ಸಾಧ್ಯವೇ ಆಗುತ್ತಿರಲಿಲ್ಲ. ಇಡೀ ಸೌರಮಂಡಲದಲ್ಲಿ ನೀರು ದೊರೆಯುವುದು ನಮ್ಮ ಭೂಮಿಯಲ್ಲಿ ಮಾತ್ರ ಎಂದು ನಮಗೆಲ್ಲ ಗೊತ್ತು. ಗಾಳಿಯ ಹಾಗೇ ನೀರೂ ಸಹ ತುಂಬಾ ಯಥೇಚ್ಛವಾಗಿ ನಮಗೆ ದೊರೆಯುತ್ತದೆ.

ಯಾವುದೇ ವಸ್ತು ಧಾರಾಳವಾಗಿ ಅಥವಾ ಸುಲಭ ವಾಗಿ ದೊರೆತರೆ, ನಮಗೆ ಸ್ವಾಭಾವಿಕವಾಗಿ ಅದರ ಬಗ್ಗೆ ಅಸಡ್ಡೆ ಅಥವಾ ನಿರಾಸಕ್ತಿ ಮೂಡುತ್ತದೆ. ಪ್ರಕೃತಿಯಲ್ಲಿ ಯಥೇಚ್ಛವಾಗಿ ದೊರೆಯುವ ನೀರು ಮತ್ತು ಗಾಳಿಯ ಬಗ್ಗೆಯೂ ನಮಗೆ ಹಾಗೆಯೇ ಆಗಿದೆ. ನಾವು ದಿನನಿತ್ಯ ಬಳಸುವ ಈ ಎರಡು ಸಂಪನ್ಮೂಲಗಳ ಬಗ್ಗೆ ನಮ್ಮ ಅರಿವು ತೀರ ಸೀಮಿತವೆಂದೇ ಹೇಳಬೇಕು. ಹೀಗಾಗಿ ಅವುಗಳ ಹಿತಮಿತ ಬಳಕೆಯ ಬಗ್ಗೆಯೂ ನಾವು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ.


A book about water and its importence

553.7K NARN