Local cover image
Local cover image
Image from Google Jackets

Bharata besuge: samparka krantiya hradayasparshi kate ಭಾರತ ಬೆಸುಗೆ: ಸಂಪರ್ಕ ಕ್ರಾಂತಿಯ ಹೃದಯಸ್ಪರ್ಶಿ ಕಥೆ

By: Contributor(s): Material type: TextTextLanguage: Kannada Publication details: Bengaluru Sahitya Loka 2016Description: xxv,517Subject(s): DDC classification:
  • 926.2K PITB
Summary: ಭಾರತ ಬೆಸುಗೆ: ಸ್ಯಾಮ್ ಪಿಟ್ರೋಡಾ ಅವರ “Dreaming Big, my journey to connect India” ಪುಸ್ತಕದ ಕನ್ನಡ ಭಾಷಾಂತರ. ಕನ್ನಡಕ್ಕೆ ಭಾಷಾಂತರ ಮಾಡಿದವರು ಬಿ ಎಸ್ ಜಯಪ್ರಕಾಶ್ ನಾರಾಯಣ್. ಸ್ಯಾಮ್ ಪಿತ್ರೋಡ ಅವರು ತಂತ್ರಜ್ಞಾನಗಳ ಹಿನ್ನೆಲೆಯಿಂದ ದೇಶವನ್ನು ಕಟ್ಟುವ ಕೆಲಸದಲ್ಲಿ ತೊಡಗಿದ್ದರೇ ವಿನಾ ಯಾವುದೋ ಕಂಪನಿಯನ್ನು ನಡೆಸುತ್ತಿರಲಿಲ್ಲ. ಅದರ ಜತೆಗೆ ಆಗಿನ ಭಾರತದ ರಾಜಕೀಯ ಮತ್ತು ತಂತ್ರಜ್ಞಾನ ರಂಗಗಳೆರಡೂ ತೀರಾ ಕಗ್ಗಂಟಿನಂತಿದ್ದವು, ಅವುಗಳನ್ನು ಬಿಡಿಸುವಂತಹ ಸೂಕ್ಷ ಗಳಿಂದ ಆಲೋಚಿಸುವ ಜಾಣತನ ಹಾಗೂ ಧೈರ್ಯ ಇವೆರಡನ್ನೂ ಸ್ಯಾಮ್ ಪಿತ್ರೋಡ ನಿಭಾಯಿಸಿದ್ದು ಅವರ ವಿಜ್ಞಾನ ಕಲಿಕೆಯು ಕೊಟ್ಟ ದಾರ್ಶನಿಕತೆ ಹಾಗೂ ತಂತ್ರಜ್ಞಾನಗಳಲ್ಲಿ ಅವರಿಟ್ಟ ನಂಬಿಕೆಯಿಂದ, 'ಎಂಜಿನಿಯರಿಂಗ್ ಎನ್ನುವುದು ತುಂಬಾ ಸಂಕೀರ್ಣವಾದ ಕ್ಷೇತ್ರ, ಈ ಎಂಜಿನಿಯರಿಂಗ್ ಗಿಂತ ನಿಜವಾದ ಸಂಕೀರ್ಣ ಸಮಸ್ಯೆಯೆಂದರೆ ಜನರು!' ಎನ್ನುವ ಅವರ ಅರಿವು ತಾವು ಕೈಗೆತ್ತಿಕೊಂಡ ಕೆಲಸವನ್ನು ಗುರಿ ಮುಟ್ಟಿಸುವಲ್ಲಿ ತುಂಬಾ ಸಹಾಯಕವಾಗಿದೆ. ಬೃಹತ್ ದೇಶವೊಂದರ ಸಂಪರ್ಕಕ್ರಾಂತಿಯನ್ನು ಅಪಾರ ಜನರ ನಡುವೆ ಸಾಧಿಸಲು ಜನರು ಸೃಷ್ಟಿಸುವ ಸಂಕೀರ್ಣತೆಯನ್ನು ದಾಟಬೇಕಾಗುತ್ತದೆ. ಇದನ್ನೆಲ್ಲ ತಿಳಿಗೊಳಿಸಲು ಇದೆಲ್ಲದರ ಜತೆಗೆ ಅವರು ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾಗ ಕಲಿತ ವಿನ್ಯಾಸ, ಪೇಟೆಂಟುಗಳು, ಡಾಕ್ಯುಮೆಂಟೇಶನ್, ಪರೀಕ್ಷೆಗಳು ಮತ್ತು ಮೌಲ್ಯಮಾಪನಗಳೇ ಅಲ್ಲದೆ, ಒಬ್ಬ ಮನುಷ್ಯನಿಗೆ ಓದುವುದು ಮತ್ತು ಬರೆಯುವುದು ಎಷ್ಟು ಮುಖ್ಯವೆಂಬ ಅರಿವು ಅವರ ಪಾಲಿಗೆ ಬಹುದೊಡ್ಡ ಮಾರ್ಗದರ್ಶಕ ಶಕ್ತಿಯಾಗಿದೆ. ಇವೆಲ್ಲವನ್ನೂ ಬಳಸಿ ಸಹೋದ್ಯೋಗಿಗಳ ಸೃಜನಶೀಲತೆಯನ್ನು ಮತ್ತು ಕೌಶಲ್ಯವನ್ನು ಬೆಳೆಸುವ ಅವರ ಔದಾರ್ಯದಿಂದ ಇಡೀ ಭಾರತದ ಬೆಸುಗೆ ಸಾಧ್ಯವಾಗಿದೆ. ಇಂತಹ ಸಾಹಸಮಯವಾದ, ಅಪರೂಪದ ಜೀವನಗಾಥೆಯನ್ನು ಕನ್ನಡಕ್ಕೆ ತರುವ ಕೆಲಸವನ್ನು ಗೆಳೆಯ ಜಯಪ್ರಕಾಶರು ಅರ್ಥಪೂರ್ಣವಾಗಿ ನಿಭಾಯಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದಂತಹ ಸಂಕೀರ್ಣ ಸಂಗತಿಗಳು ಕನ್ನಡದ ಮನಸ್ಸಿಗೆ ಒಗ್ಗುವಂತೆ ಸೆರೆಹಿಡಿಯುವಲ್ಲಿ ಜಯಪ್ರಕಾಶರ ಅನುವಾದವು ಸೊಗಸಾದ ಕೆಲಸ ಮಾಡಿದೆ. ವೈವಿಧ್ಯಮಯ ಬರಹ, ಅನುವಾದಗಳಿ೦ದ ಓದುಗರನ್ನು ಎಚ್ಚರಿಸುವ ಇವರ ಆಸಕ್ತಿಯು ಅನನ್ಯವಾದುದು. ಈಗಾಗಲೇ ಉದ್ಯಮ, ರಾಜಕೀಯ, ಸಂಗೀತದಂತಹ ವೈವಿಧ್ಯಮಯ ಅನುವಾದಗಳನ್ನು ಹಿತವಾಗಿ ಸಾಧಿಸಿರುವ ಅವರು, ತಂತ್ರಜ್ಞಾನಗಳ ಔನ್ನತ್ಯದ ಮೂಲಕ ಸಾಮಾಜಿಕ ಏಳಿಗೆಯ ಕನಸನ್ನು ವಿವರಿಸುವ ಸಾಹಸದಲ್ಲಿ ಗೆದ್ದಿದ್ದಾರೆ. ವಿಜ್ಞಾನ-ತಂತ್ರಜ್ಞಾನಗಳ ಮೂಲಕ ಜೀವನದ ಏಳಿಗೆಯ ಬೆಸುಗೆಯನ್ನು ಅರ್ಥಪೂರ್ಣವಾಗಿ ಹೆಣೆದಿದ್ದಾರೆ. ಈ ಮೂಲಕ ಕನ್ನಡಕ್ಕೊಂದು ವಿಶಿಷ್ಟ ಕೃತಿಯ ಓದನ್ನು ಸಾಧ್ಯವಾಗಿಸಿದ್ದಾರೆ. -ಡಾ.ಟಿ ಎಸ್ ಚನ್ನೇಶ್ ಖಾತ ವಿಜ್ಞಾನ ಲೇಖಕರು (ಮುನ್ನುಡಿಯಿಂದ)
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library General 926.2K PITB (Browse shelf(Opens below)) Available 071091
Total holds: 0

ಭಾರತ ಬೆಸುಗೆ: ಸ್ಯಾಮ್ ಪಿಟ್ರೋಡಾ ಅವರ “Dreaming Big, my journey to connect India” ಪುಸ್ತಕದ ಕನ್ನಡ ಭಾಷಾಂತರ. ಕನ್ನಡಕ್ಕೆ ಭಾಷಾಂತರ ಮಾಡಿದವರು ಬಿ ಎಸ್ ಜಯಪ್ರಕಾಶ್ ನಾರಾಯಣ್.

ಸ್ಯಾಮ್ ಪಿತ್ರೋಡ ಅವರು ತಂತ್ರಜ್ಞಾನಗಳ ಹಿನ್ನೆಲೆಯಿಂದ ದೇಶವನ್ನು ಕಟ್ಟುವ ಕೆಲಸದಲ್ಲಿ ತೊಡಗಿದ್ದರೇ ವಿನಾ ಯಾವುದೋ ಕಂಪನಿಯನ್ನು ನಡೆಸುತ್ತಿರಲಿಲ್ಲ. ಅದರ ಜತೆಗೆ ಆಗಿನ ಭಾರತದ ರಾಜಕೀಯ ಮತ್ತು ತಂತ್ರಜ್ಞಾನ ರಂಗಗಳೆರಡೂ ತೀರಾ ಕಗ್ಗಂಟಿನಂತಿದ್ದವು, ಅವುಗಳನ್ನು ಬಿಡಿಸುವಂತಹ ಸೂಕ್ಷ ಗಳಿಂದ ಆಲೋಚಿಸುವ ಜಾಣತನ ಹಾಗೂ ಧೈರ್ಯ
ಇವೆರಡನ್ನೂ ಸ್ಯಾಮ್ ಪಿತ್ರೋಡ ನಿಭಾಯಿಸಿದ್ದು ಅವರ ವಿಜ್ಞಾನ ಕಲಿಕೆಯು ಕೊಟ್ಟ ದಾರ್ಶನಿಕತೆ ಹಾಗೂ ತಂತ್ರಜ್ಞಾನಗಳಲ್ಲಿ ಅವರಿಟ್ಟ ನಂಬಿಕೆಯಿಂದ,
'ಎಂಜಿನಿಯರಿಂಗ್ ಎನ್ನುವುದು ತುಂಬಾ ಸಂಕೀರ್ಣವಾದ ಕ್ಷೇತ್ರ, ಈ ಎಂಜಿನಿಯರಿಂಗ್ ಗಿಂತ
ನಿಜವಾದ ಸಂಕೀರ್ಣ ಸಮಸ್ಯೆಯೆಂದರೆ ಜನರು!' ಎನ್ನುವ ಅವರ ಅರಿವು ತಾವು ಕೈಗೆತ್ತಿಕೊಂಡ ಕೆಲಸವನ್ನು ಗುರಿ ಮುಟ್ಟಿಸುವಲ್ಲಿ ತುಂಬಾ ಸಹಾಯಕವಾಗಿದೆ. ಬೃಹತ್ ದೇಶವೊಂದರ ಸಂಪರ್ಕಕ್ರಾಂತಿಯನ್ನು ಅಪಾರ ಜನರ ನಡುವೆ ಸಾಧಿಸಲು ಜನರು ಸೃಷ್ಟಿಸುವ ಸಂಕೀರ್ಣತೆಯನ್ನು ದಾಟಬೇಕಾಗುತ್ತದೆ. ಇದನ್ನೆಲ್ಲ ತಿಳಿಗೊಳಿಸಲು ಇದೆಲ್ಲದರ ಜತೆಗೆ ಅವರು ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾಗ ಕಲಿತ ವಿನ್ಯಾಸ, ಪೇಟೆಂಟುಗಳು, ಡಾಕ್ಯುಮೆಂಟೇಶನ್, ಪರೀಕ್ಷೆಗಳು ಮತ್ತು ಮೌಲ್ಯಮಾಪನಗಳೇ ಅಲ್ಲದೆ, ಒಬ್ಬ ಮನುಷ್ಯನಿಗೆ ಓದುವುದು ಮತ್ತು ಬರೆಯುವುದು ಎಷ್ಟು ಮುಖ್ಯವೆಂಬ ಅರಿವು ಅವರ ಪಾಲಿಗೆ ಬಹುದೊಡ್ಡ ಮಾರ್ಗದರ್ಶಕ ಶಕ್ತಿಯಾಗಿದೆ. ಇವೆಲ್ಲವನ್ನೂ ಬಳಸಿ ಸಹೋದ್ಯೋಗಿಗಳ ಸೃಜನಶೀಲತೆಯನ್ನು ಮತ್ತು ಕೌಶಲ್ಯವನ್ನು ಬೆಳೆಸುವ ಅವರ ಔದಾರ್ಯದಿಂದ ಇಡೀ ಭಾರತದ ಬೆಸುಗೆ ಸಾಧ್ಯವಾಗಿದೆ.
ಇಂತಹ ಸಾಹಸಮಯವಾದ, ಅಪರೂಪದ ಜೀವನಗಾಥೆಯನ್ನು ಕನ್ನಡಕ್ಕೆ ತರುವ ಕೆಲಸವನ್ನು ಗೆಳೆಯ ಜಯಪ್ರಕಾಶರು ಅರ್ಥಪೂರ್ಣವಾಗಿ ನಿಭಾಯಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದಂತಹ ಸಂಕೀರ್ಣ ಸಂಗತಿಗಳು ಕನ್ನಡದ ಮನಸ್ಸಿಗೆ ಒಗ್ಗುವಂತೆ ಸೆರೆಹಿಡಿಯುವಲ್ಲಿ ಜಯಪ್ರಕಾಶರ ಅನುವಾದವು ಸೊಗಸಾದ ಕೆಲಸ ಮಾಡಿದೆ. ವೈವಿಧ್ಯಮಯ ಬರಹ, ಅನುವಾದಗಳಿ೦ದ ಓದುಗರನ್ನು ಎಚ್ಚರಿಸುವ ಇವರ ಆಸಕ್ತಿಯು ಅನನ್ಯವಾದುದು. ಈಗಾಗಲೇ ಉದ್ಯಮ, ರಾಜಕೀಯ, ಸಂಗೀತದಂತಹ ವೈವಿಧ್ಯಮಯ ಅನುವಾದಗಳನ್ನು ಹಿತವಾಗಿ ಸಾಧಿಸಿರುವ ಅವರು, ತಂತ್ರಜ್ಞಾನಗಳ ಔನ್ನತ್ಯದ ಮೂಲಕ ಸಾಮಾಜಿಕ ಏಳಿಗೆಯ ಕನಸನ್ನು ವಿವರಿಸುವ ಸಾಹಸದಲ್ಲಿ ಗೆದ್ದಿದ್ದಾರೆ. ವಿಜ್ಞಾನ-ತಂತ್ರಜ್ಞಾನಗಳ ಮೂಲಕ ಜೀವನದ ಏಳಿಗೆಯ ಬೆಸುಗೆಯನ್ನು ಅರ್ಥಪೂರ್ಣವಾಗಿ ಹೆಣೆದಿದ್ದಾರೆ. ಈ ಮೂಲಕ ಕನ್ನಡಕ್ಕೊಂದು ವಿಶಿಷ್ಟ ಕೃತಿಯ ಓದನ್ನು ಸಾಧ್ಯವಾಗಿಸಿದ್ದಾರೆ.
-ಡಾ.ಟಿ ಎಸ್ ಚನ್ನೇಶ್ ಖಾತ ವಿಜ್ಞಾನ ಲೇಖಕರು
(ಮುನ್ನುಡಿಯಿಂದ)

There are no comments on this title.

to post a comment.

Click on an image to view it in the image viewer

Local cover image